Connect with us

Dvgsuddi Kannada | online news portal | Kannada news online

ದಾವಣಗೆರೆ: ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ 

bescom 22

ದಾವಣಗೆರೆ

ದಾವಣಗೆರೆ: ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ 

ದಾವಣಗೆರೆ: ಯರಗುಂಟೆ ದಾವಣಗೆರೆ ವ್ಯಾಪ್ತಿಯ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್08-ವಿಜಯನಗರ ಎಫ್15-ಕಮರ್ಷಿಯಲ್ ಮಾರ್ಗಗಳ ವ್ಯಾಪಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಲಸಿರಿ ಶುದ್ದ ಕುಡಿಯುವ ನೀರು ಸರಬರಾಜು ಯೋಜನೆ ಹಾಗು ಸ್ಮಾರ್ಟಸಿಟಿ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಡಿ.13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್08-ವಿಜಯನಗರ ಫೀಡರ್‍ನ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್‍ಪಿ ಆಫೀಸ್, ಆರ್‍ಟಿಓ ಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್‍ಪಿಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.

ಎಫ್15-ಕಮರ್ಷಿಯಲ್ ಫೀಡರ್‍ನ ವ್ಯಾಪ್ತಿಯ ಹಗೆದಿಬ್ಬ ಸರ್ಕಲ್, ಗಾಂಧಿನಗರ ಅಂಬೇಡ್ಕರ್ ಸರ್ಕಲ್, ಮಹಾರಾಜ ಪೇಟೆ, ಬಸವರಾಜ ಪೇಟೆ, ಚೌಕಿಪೇಟೆ, ವಿಜಯಲಕ್ಷ್ಮಿ ರಸ್ತೆ, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಎಸ್‍ಕೆಪಿ ರಸ್ತೆ, ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್11-ಎಲ್‍ಎಫ್1 ಫೀಡರ್‍ನ ವ್ಯಾಪ್ತಿಯ ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ, ಕೆಆರ್ ರಸ್ತೆ, ಗಡಿಯಾರ ಕಂಬ, ಬಿಟಿ ಗಲ್ಲಿ, ಬೆಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೋಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪಭಾಗ, ವಸಂತ ಟಾಕೀಸ್ ಸ್ವಲ್ಪಭಾಗ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top