ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) 2021ನೇ ಸಾಲಿನ 36 ಇಂಜಿನಿಯರ್ ಹುದ್ದೆ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಹುದ್ದೆ: ಪ್ರಾಜೆಕ್ಟ್ ಎಂಜಿನಿಯರ್
- ಹುದ್ದೆಗಳ ಸಂಖ್ಯೆ: 36
- ಸ್ಥಳ: ಬೆಂಗಳೂರು
- ವಿದ್ಯಾರ್ಹತೆ: ಬಿ.ಇ, ಬಿ.ಟೆಕ್, ಎಂಬಿಎ, ಪಿಜಿ ಡಿಪ್ಲೊಮಾ, ಬಿ. ಆರ್ಕ್ ಪದವಿ
- ವೇತನ: 35 ಸಾವಿರ ಮೂಲ ವೇತನ
- ವಯೋಮಿತಿ: 28 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ ಇದೆ.
- ಆಯ್ಕೆ ಪ್ರಕ್ರಿಯೆ: ಪದವಿ ಅಂತಿಮ ವರ್ಷದ ಅಂಕಗಳ ಸರಾಸರಿ ಹಾಗೂ ವೈಯಕ್ತಿಕ ಸಂದರ್ಶನ.
- ಅರ್ಜಿ ಶುಲ್ಕ: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಯ ಒಬಿಸಿ ಅಭ್ಯರ್ಥಿಗಳಿಗೆ 500 ಇದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 26, 2021. ಹೆಚ್ಚಿನ ಮಾಹಿತಿಗೆ: https://bel-india.in ವೆಬ್ ಸೈಟ್ ಭೇಟಿ ನೀಡಿ



