ದಾವಣಗೆರೆ: ದಾವಣಗೆರೆ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಫೀಡರ್ನಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ತುರ್ತು ಕಾರ್ಯ ಹಮ್ಮಿಕೊಂಡಿದ್ದು, ಇಂದು ನ.25 ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಸವೇಶ್ವರ ಫೀಡರ್ ವ್ಯಾಪ್ತಿಯಲ್ಲಿನ ಎಸ್.ಎಸ್. ಬಡಾವಣೆ, ‘ಎ’ ಬ್ಲಾಕ್, ಬಾಪೂಜಿ ಎಮ್ಬಿಎ ಕಾಲೇಜ್ ಅಥಣಿ ಕಾಲೇಜ್, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



