ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗದ ಉಚ್ಚoಗೆಮ್ಮನ ಸನ್ನಿಧಿಯಲ್ಲಿರುವ ಅರಿಶಿಣ ಹೊಂಡ,ಆನೆ ಹೊಂಡಗಳು ಉತ್ತಮ ಮಳೆಯಿಂದ ಭರ್ತಿಯಾಗಿದ್ದು, ಈ ಹೊಂಡಗಳಿಗೆ ಶ್ರೀ ಉತ್ಸವಾoಭ ವ್ಯವಸ್ಥಾಪಕ ಸಮಿತಿ,ಮುಜುರಾಯಿ ಇಲಾಖೆ, ಅರ್ಚಕರು, ಭಕ್ತರ ಸಮ್ಮುಖದಲ್ಲಿ ಹೊಂಡಗಳಿಗೆ ಗಂಗೆ ಪೂಜೆಯನ್ನು ಮಾಡಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಸದಸ್ಯರಾದ ಬೀರಪ್ಪ, ಶಕ್ತಿ ದೇವತೆ ಉಚ್ಚoಗೆಮ್ಮನ ಆಶೀರ್ವಾದದಿಂದ ಉತ್ತಮ ಮಳೆಯಾಗಿದ್ದು ಹೊಂಡಗಳು ತುಂಬಿವೆ. ಪ್ರತಿ ವರ್ಷ ರಾಜ್ಯಕ್ಕೆ ಉತ್ತಮ ಮಳೆ ಬೆಳೆ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಉತ್ಸವಾಂಭ ಸಮಿತಿಯ ಅಧ್ಯಕ್ಷ ಶಿವಕುಮಾರ್ ಸ್ವಾಮ, ಮಾಜಿ ಅಧ್ಯಕ್ಷ ಕೆಂಚ್ಚಪ್ಪ, ಸಿದ್ದೇಶ್ವರಗೌಡ, ಬೀರಪ್ಪ, ಅರ್ಚಕ ಸಿದ್ಧಲಿಂಗಪ್ಪ, ಗುಮಾಸ್ತ ರಮೇಶ್ ಹಾಗೂ ಭಕ್ತರು ಉಪಸ್ಥಿತರಿದ್ದರು.