ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಡಿಎಆರ್ ಘಟಕ ಮತ್ತು ವಿಶೇಷ ಘಟಕಗಳಿಗೆ ಸೇರಿ ಒಟ್ಟು 464 ಪೊಲೀಸ್ ಹುದ್ದೆಗಳ ಅಗತ್ಯವಿದೆ. ಇದರಲ್ಲಿ 121 ವಿವಿಧ ಸಿಬ್ಬಂದಿಯನ್ನು ಬಳ್ಳಾರಿಯಿಂದ ಸ್ಥಳಾಂತರಿಸಲು ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ಬಳ್ಳಾರಿ ವಲಯದ ಪೊಲೀಸ್ ಮಹಾನಿರ್ದೇಶಕರ ಮನವಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ 121 ಹುದ್ದೆಗಳ ಸ್ಥಳಾಂತರ ನಡೆಯುತ್ತದೆ. ಬಳಿಕ 343 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿದೆ.
ಬಳ್ಳಾರಿ ಜಿಲ್ಲೆಯಿಂದ ವಿಜಯನಗರಕ್ಕೆ ಪ್ರಥಮ ದರ್ಜೆ ಸಹಾಯಕರು-4, ಬೆರಳಚ್ಚುಗಾರ-1, ಡಿಎಆರ್ ಘಟಕದಲ್ಲಿ ಪಿಎಸ್‌ಐ/ಆರ್‌ಎಸ್‌ಐ-1, ಎಎಸ್‌ಐ/ಎಆರ್‌ಎಸ್‌ಐ-15, ಸಿಎಚ್‌ಸಿ/ಎಎಚ್‌ಸಿ-30, ಸಿಪಿಸಿ/ಎಪಿಸಿ-70 ಹುದ್ದೆ ಸ್ಥಳಾಂತರಕ್ಕೆ ಒಪ್ಪಿಗೆ ಸಿಕ್ಕಿದೆ.



