ಬೆಂಗಳೂರು: ಹೊಸ ವಾಹನ ಖರೀದಿಸಿದ ನಂತೆ ನಿರೀಕ್ಷಕರ ಪರಿವೀಕ್ಷಣೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ತೆಗೆದುಕೊಂಡು ಹೋಗಿ ವಾಹನ ನೊಂದಣಿ ಮಾಡಿಸಬೇಕಾಗಿತ್ತು. ಇದೀಗ ಸಾರಿಗೆ ಇಲಾಖೆ ಆನ್ ಲೈನ್ ನಲ್ಲಿಯೇ ನೋಂದಣಿಗೆ ಅಕಾಶ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಹೊಸ ವಾಹನ ಖರೀದಿದಾರರು ಆನ್ ಲೈನ್ ನಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು.
ಈ ಬಗ್ಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿದ್ದು, ತಯಾರಿಕಾ ಹಂತದಲ್ಲಿಯೇ ರಸ್ತೆ ಬಳಕೆಗೆ ಯೋಗ್ಯವಾಗುವಂತೆ ಸಂಪೂರ್ಣ ನಿರ್ಮಿತವಾಗಿರುವ ( Fully Built ) ಹಾಗೂ ಅಧಿಕೃತ ಮಾರಾಟಗಾರರಿಂದ ಮಾರಾಟವಾದ ನಂತರ ಪ್ರಥಮ ಬಾರಿಗೆ ನೋಂದಣಿ ( First Time Vehicle Registration ) ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರು ಪಡಿಸುವ ನಿಯಮಾವಳಿಗೆ ತಿದ್ದುಪಡಿತರಲಾಗಿದೆ. ಈ ಮೂಲಕ ಹೊಸ ವಾಹನಗಳನ್ನು ಆನ್ ಲೈನ್ ನಲ್ಲಿ ನೋಂದಣಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.
ಅಧಿಕೃತ ಮಾರಾಟಗಾರರಿಂದ ಮಾರಾಟಮಾಡಿದ ವಾಹನಗಳ ವಿವರಗಳನ್ನು ವಾಹನ-4 ಪೋರ್ಟಲ್ ನಲ್ಲಿ ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್ ಲೈನ್ ( Online ) ಮೂಲಕ ಪಾವತಿಸಿ, ಅರ್ಜಿಯನ್ನು ಆನ್ ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸುವುದು.ನೋಂದಣಿ ಪ್ರಾಧಿಕಾರದಿಂದ ಅನುಮೋದನೆ ನಂತೆ ನೋಂದಣಿ ಕ್ರಮಾಂಕವನ್ನು ನೀಡುವಂತೆ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆ ಸದುಪಯೋಗವನ್ನು ಹೊಸದಾಗಿ ಖರೀದಿಸುವ ಸಾರ್ವಜನಿಕರು ಸೌಲಭ್ಯ ಪಡೆದುಕೊಳ್ಳಬಹುದು ಎಂದು ಕೋರಿದ್ದಾರೆ.



