ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಜಗಳೂರು ಸಂಯುಕ್ತಾಶ್ರಯದೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಬಗ್ಗೆ ಒಂದು ದಿನದ ತರಬೇತಿಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಪ ಕೃಷಿ ನಿರ್ದೇಶಕ ಶ್ರೀ ತಿಪ್ಪೇಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸುವುದರ ಜೊತೆಗೆ ನವೀನ ತಂತ್ರಜ್ಞಾನಗಳನ್ನು ಬಳಸುವುದರಿಂದ ಇಳುವರಿಯನ್ನು ಹೆಚ್ಚಿಸಬಹುದು ಎಂದರು.
ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ. ಮಾತನಾಡಿ, ಕಡಲೆಯಲ್ಲಿ ಅಧಿಕ ಇಳುವರಿ ಕೊಡುವ ತಳಿಗಳಾದ JAKI- 9218/ JG-14/11 ನ್ನು ಜೈವಿಕ ಗೊಬ್ಬರಗಳಾದ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಗೊಬ್ಬರದಿಂದ 500 ಗ್ರಾಂ ಪ್ರತಿ ಎಕರೆಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು ಎಂದರು.
ಕೇಂದ್ರದ ಮಣ್ಣು ವಿಜ್ಞಾನಿಗಳಾದ ಶ್ರೀ ಹೆಚ್. ಎಂ. ಸಣ್ಣಗೌಡರು ಮಾತನಾಡಿ, ಜೈವಿಕ ಶಿಲೀಂದ್ರ ನಾಶಕವಾದ ಟ್ರೆöÊಕೋಡರ್ಮಾ ೪ ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡುವುದರಿಂದ ಕತ್ತು ಕೊಳೆ ರೋಗವನ್ನು ನಿಯಂತ್ರಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್., ಶ್ರೀ ಶ್ರೀನಿವಾಸಲು ಬಿ.ವಿ., ಸಹಾಯಕ ಕೃಷಿ ನಿರ್ದೇಶಕರು, ಜಗಳೂರು, ಶ್ರೀ ಚಂದ್ರಶೇಖರ ಮತ್ತು ಶ್ರೀ ರೇಣುಕುಮಾರ್, ಆತ್ಮಯೋಜನೆ ಅಧಿಕಾರಿಗಳು ಹಾಗೂ ಕಲ್ಲೇದೇವರಪುರದ ಪ್ರಗತಿಪರ ರೈತರು ಭಾಗವಹಿಸಿದ್ದರು. ಕೃಷಿ ವಿಸ್ತರಣಾ ತಜ್ಞರಾದ ಶ್ರೀ ರಘುರಾಜ ಉಪಸ್ಥಿತರಿದ್ದರು.



