ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ತೆರೆ ಬಿದ್ದಿದೆ. ಇನ್ನೇನಿದ್ದರೂ, ಸೋಲು-ಗೆಲುವಿನ ಲೆಕ್ಕಾಚಾರ. ಚುನಾವಣೆ ಫಲಿತಾಂಶದ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿದ್ದೇನು ಗೊತ್ತಾ..?
38ನೇ ವಾರ್ಡ್ ನಲ್ಲಿ ಮತಚಲಾಯಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ಮತಗಟ್ಟೆ ಸಂಖ್ಯೆ 318 ರಲ್ಲಿ ಮತಚಲಾಯಿಸಿದರು. ಮತದಾನ ನಂತರ ಮಾತನಾಡಿದ ಅವರು, ಈ ಬಾರಿಯೂ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈಗ ಹೆಚ್ಚಾಗಿ ಏನು ಹೇಳುವುದಿಲ್ಲ. ಇನ್ನೆರಡು ದಿನ ಬಿಟ್ಟು ನೋಡಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅಂದ್ರು.



