ದಾವಣಗೆರೆ: ಅಪಘಾತದ ಪರಿಹಾರವಾಗಿ ನ್ಯಾಯಾಲಯದ ಆದೇಶದಂತೆ 2.28 ಕೋಟಿ ಪರಿಹಾರ ನೀಡದ ಹಾವೇರಿ ವಿಭಾಗದ ಕೆಎಸ್‌ಆರ್‌ಟಿಸಿ(ksrt) ಬಸ್ ಅನ್ನು ಜಪ್ತಿ ಮಾಡಲಾಗಿದೆ.
2014ರಲ್ಲಿ ಬೆಂಗಳೂರಿನಿಂದ ಹಾವೇರಿ ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ದಾವಣಗೆರೆಯ ಗೌರಿ ಎಸ್. ಪಾಟೀಲ್ ಎಂಬುವರು ಮೃತಪಟ್ಟಿದ್ದರು. ಇದಕ್ಕೆ ಪರಿಹಾರವಾಗಿ 2.88 ಕೋಟಿ ನೀಡುವಂತೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಕೆಎಸ್ ಆರ್ ಟಿಸಿ ಹಾವೇರಿ ಡಿಪೋಗೆ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಹಾವೇರಿ ಡಿಪೋ ಪರಿಹಾರ ಹಣ ನೀಡಿರಲಿಲ್ಲ. ಕೋರ್ಟ್ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ಬಸ್ ಜಪ್ತಿ ಮಾಡಲಾಗಿದೆ.



