Connect with us

Dvgsuddi Kannada | online news portal | Kannada news online

ದೇವಾಲಯಗಳಿಗೆ ಹಣ ನೀಡುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ಹಣ ನೀಡಿ: ಸಾಣೇಹಳ್ಳಿ ಶ್ರೀ

ಚನ್ನಗಿರಿ

ದೇವಾಲಯಗಳಿಗೆ ಹಣ ನೀಡುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ಹಣ ನೀಡಿ: ಸಾಣೇಹಳ್ಳಿ ಶ್ರೀ

ಡಿವಿಜಿ ಸುದ್ದಿ, ಚನ್ನಗಿರಿ: ಸಾವಿರಾರು ದೇವಾಲಯಗಳಿಗೆ ಹಣ ನೀಡುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ಗ್ರಂಥಾಲಯಗಳ ಅಭಿವೃದ್ಧಿಗೆ , ಹಸಿದವರಿಗೆ  ಹಾಗೂ ವೃದ್ಧಾಶ್ರಮಗಳಿಗೆ ದೇಣಿಗೆ ನೀಡಿ ಎಂದು ತರಳಬಾಳು ಶಾಖಾ ಮಠ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಹಿರೇ ಕೋಗಲೂರು ಗ್ರಾಮದಲ್ಲಿ ಹಿರಿಯ ಸಂಶೋಧಕ, ನಾಡೋಜ ಡಾ. ಎಂ ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನ , ಶ್ರೀ  ಈಶ್ವರ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ , ಹಾಗೂ ಶ್ರೀ ತರಳಬಾಳು ಜಗದ್ಗುರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಹಯೋಗದೊಂದಿಗೆ ನಾಡೋಜ ಡಾ. ಎಂ. ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನದ  ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಾನಿಧ್ಯ ವಹಿಸಿ ಮಾತನಾಡಿದರು.

ಜನರು ಹಣದ ಹಿಂದೆ ಓಡಿದಷ್ಟು ಸಂಸ್ಕೃತಿಯ ಹಿಂದೆ ಓಡುತ್ತಿಲ್ಲ. ಹಣವೆ ಪ್ರಧಾನವಾಗುತ್ತಿದೆ. ಗುಣ ಗೌಣ ವಾಗುತ್ತಿದೆ.  ಹಣವನ್ನು ಅತಿಹೆಚ್ಚಾಗಿ ದೇವಾಸ್ಥಾನಗಳಿಗೆ , ಚರ್ಚ್ ಗಳಿಗೆ ಉದಾರವಾಗಿ ದೇಣಿಗೆಯನ್ನು ನೀಡುತ್ತೇವೆ ಬದಲಾಗಿ ರೈತರಿಗೆ ಉಚಿತವಾಗಿ ಬೀಜಗಳನ್ನು ನೀಡವುದು , ಅನಾಥ ಮಗುವನ್ನು ದತ್ತು ಪಡೆಯುವುದು , ಹಸಿದ ವ್ಯೆಕ್ತಿಯ ಹೊಟ್ಟೆಯನ್ನು ತುಂಬಿಸುವುದು ಹಳ್ಳಿಯ ಗ್ರಂಥಾಲಯಗಳನ್ನು ಅಭಿವೃಧ್ಧಿ ಪಡಿಸುವುದು , ಅಂಗವಿಕಲ ವ್ಯಕ್ತಿಗಳಿಗೆ ಸಹಾಯ ಮಾಡುವುದು ವೃದ್ಧಾಶ್ರಮಕ್ಕೆ ಸಹಾಯ ಮಾಡಿದರೆ, ದೈವಾನುಗ್ರಹಕ್ಕೆ ಅತಿ ಹೆಚ್ಚು ಪ್ರೀತಿ ಪಾತ್ರರಾಗುತ್ತೇವೆ. ಹಣವನ್ನು ಸಾವಿರ ದೇವಸ್ಥಾನಗಳಿಗೆ ನೀಡುವ ಬದಲಾಗಿ ಬಡ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಗ್ರಂಥಾಲಯಗಳಿಗೆ ನೀಡಿ ಎಂದರು.

ಮಧುವಣಗಿತ್ತಿಯಂತೆ ಶೃಂಗಾರವಾದ ಕೋಗಲೂರು ಗ್ರಾಮ

ನಾಡೋಜ ಎಂ ಚಿದಾನಂದಮೂರ್ತಿ ಹಾಗೂ ಪಂಡಿತರಾಧ್ಯ ಶ್ರೀಗಳು  ಕೋಗಲೂರು ಬರುವ ಹಿನ್ನೆಲೆಯಲ್ಲಿ  ಇಡೀ ಗ್ರಾಮ ಮಧುವಣಗಿತ್ತಿಯಂತೆ ಮಾವಿನ ಸೊಪ್ಪು ಬಾಳೆದಿಂಡಿನಲ್ಲಿ ಅಲಂಕರಿಸಲಾಗಿತ್ತು.  ಮೂಲತಃ ಎಂ. ಚಿದಾನಂದಮೂರ್ತಿ  ಅವರ  ಹುಟ್ಟೂರಿಗೆ ಬಂದಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನಾ ನೂರಾರು  ಯುವತಿಯರು ಕುಂಭಗಳನ್ನು  ಹೊತ್ತು  ಹಾಗೂ ಯುವಕರ ನಾಸಿಕ್ ಡೋಲುಗಳ ನಗಾರಿಗಳೊಂದಿಗೆ ಶ್ರೀಗಳನ್ನು  ಬರಮಾಡಿ ಕೊಂಡರು. ನಂತರ ಡಾ. ಎಂ ಚಿದಾನಂದಾ ಮೂರ್ತಿ ಪ್ರತಿಷ್ಠಾನ ಭವನವನ್ನು ಶಾಸಕರಾದ ಮಾಡಾಳು ವೀರೂಪಾಕ್ಷಪ್ಪ ಉದ್ಘಾಟಿಸಿದರು. ಆಲೂರು-ಕೋಗಲೂರು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಗುದ್ದಲಿ ಪೂಜೆಯನ್ನು ಶ್ರೀಗಳು ನೇರವೇರಿಸಿದರು.

ಶಾಸಕ ಮಾಡಾಳ್ ವೀರೂಪಾಕ್ಷಪ್ಪ  ಮಾತನಾಡಿ, ಕೋಗಲೂರು ಗ್ರಾಮದಲ್ಲಿ ಹುಟ್ಟಿ. ರಾಜ್ಯಕ್ಕೆ ದೇಶಕ್ಕೆ ಅಪಾರವಾದ ಗೌರವ ತಂದವರು  ಎಂ. ಚಿದಾನಂದಮೂರ್ತಿ  ಅವರು. ಅವರು ಕನ್ನಡಕ್ಕೆ ಕೊಟ್ಟ ಸ್ಥಾನಮಾನ ಅಜಾರಾಮರ.  ಎಂ ಚಿದಾನಂದಮೂರ್ತಿರವರ ಹೆಸರಲ್ಲಿ ಕಟ್ಟಿಸಿರುವ ಭವನಕ್ಕೆ ಅಗತ್ಯ ಸೌಲಭ್ಯ ನೀಡಲು ನಾವು ಸಿದ್ಧರಿದ್ದೇವೆ. 50 ಸಾವಿರ  ಹಣವನನ್ನು ಗ್ರಂಥಾಲಯದ ಪುಸ್ತಕಗಳ ಖರೀದಿಗಾಗಿ ಉಪಯೋಗಿಸಿ ಎಂದರು.

ಸಂಸದ ಜಿ.ಎಂ. ಸಿದ್ಧೇಶ್ವರ,  ಹೊನ್ನಾಳಿ‌ ಶಾಸಕ ಎಂ.ಪಿ‌. ರೇಣುಕಾಚಾರ್ಯ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕುತ ಶಾಂತ ಗಂಗಾಧರ,   ಹೆಚ್. ವಿ. ವಾಮದೇವಪ್ಪ,  ಎಂ.ಎಸ್. ಆಶಾದೇವಿ, ಜಿಪಂ ಸದಸ್ಯರುಗಳಾದ ತೇಜಸ್ವಿ ಪಾಟೀಲ್ , ಸಾಕಮ್ಮ ಗಂಗಾದರನಾಯ್ಕ , ತಾಪಂ ಅಧ್ಯಕ್ಷರು  ಸದಸ್ಯರು ಉಷಾ ಶಶಿಕುಮಾರ್ , ವೀಣಾಕುಮಾರಿ ಹನುಮಂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top