ದಾವಣಗೆರೆ: ನಾನು ಚಡ್ಡಿ ಹಾಕಿಕೊಳ್ಳುವಾಗ ಜೋಳ, ಗೋಧಿ ಬೆಲೆ 30 ರೂಪಾಯಿ ಇತ್ತು. ಪ್ಯಾಂಟ್ ಹಾಕುವ ಹೊತ್ತಿಗೆ 3 ಸಾವಿರ ರೂಪಾಯಿ ಆಗಿದೆ ಎನ್ನುವ ಮೂಲಕ ಬೆಲೆ ಏರಿಕೆಯನ್ನು ಸಂಸದ ಜಿ.ಎಂ ಸಿದ್ದೇಶ್ವರ ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಡ್ಡಿ ಹಾಕಿಕೊಳ್ಳುವಾಗ ಜೋಳ, ಗೋಧಿ ಬೆಲೆ 30 ರೂಪಾಯಿ ಇತ್ತು. ಪ್ಯಾಂಟ್ ಹಾಕುವಾವ ಹೊತ್ತಿಗೆ 3 ಸಾವಿರ ರೂಪಾಯಿ ಆಗಿದೆ . ಈಗ ಪೆಟ್ರೋಲ್ ಬೆಲೆ ಎಂಟಾಣೆ ಇತ್ತು. ಕೂಲಿ 5 ರೂಪಾಯಿ ಇತ್ತು. ಆದರೆ ಇದೀಗ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಅದು ಆಯಾ ಕಾಲಕ್ಕೆ ತಕ್ಕಂತ ಎಲ್ಲಾ ಬದಲಾಗಿದೆ ಎಂದರು.
ರೈತರ ಅನುಕೂಲವಾಗುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ರೈತರು ಯಾರು ಕಾಯ್ದೆಯನ್ನು ವಿರೋಧಿಸಿಲ್ಲ. ಸಂಘಟನೆಯವರು ಮಾತ್ರ ವಿರೋಧಿಸುತ್ತಿದ್ದಾರೆ. ಹೀಗಾಗಿ ಜನ ಕೊರೊನಾದಿಂದ ಬೇಸತ್ತಿದ್ದಾರೆ. ಹೋರಾಟಗಾರರು ಇಂತಹ ಪ್ರತಿಭಟನೆ ಕೈಬಿಟ್ಟರೆ ಒಳ್ಳೆದು ಎಂದರು.



