ದಾವಣಗೆರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಯಾರು ಬ್ರೇಕ್ ಹಾಕಿಲ್ಲ. ಬೇಕಾದಾಗ ಅವರೇ (ಬಿಎಸ್ ವೈ) ಬ್ರೇಕ್ ಹಾಕುತ್ತಾರೆ ಎಂದು ಬಿಎಸ್ ವೈ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ದಾವಣಗೆರೆಯಲ್ಲಿ ಆಯೋಜಿಸಿರುವ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನಂದ್ರೂ ಸರಿ ನಮ್ಮ ತಂದೆಯವರು ರಾಜ್ಯ ಪ್ರವಾಸ ಮಾಡಲಿದ್ಧಾರೆ. ಪಕ್ಷ ಸಂಘಟನೆ ನಮ್ಮ ಅವರಿಗೆ ರಕ್ತಗತವಾಗಿ ಬಂದಿದೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿ ಹಾಗೂ ಇತರ ಮಹತ್ವ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಉಪಚುನಾವಣೆಯ ಉಸ್ತುವಾರಿ ಯಾರಿಗೆ ವಹಿಸಬೇಕು ಎಂಬುದು ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು,