ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಆಚರಣೆಯನ್ನು ನಿರುದ್ಯೋಗಿಗಳ ದಿನವಾಗಿ ಆಚರಿಸಲು ದಾವಣಗೆರೆ ಯುವ ಕಾಂಗ್ರೆಸ್ ನಿರ್ಧಾರಿಸಿದೆ. ಈ ಬಗ್ಗೆ ಇಂದು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಪ್ರಧಾನಿಗೆ ಪೋಸ್ಟ್ ಮಾಡಿದರು.
ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು. Happy Birthday PM Modi. Happy Unemployment Day ಎಂದು ರಕ್ತದಲ್ಲಿ ಪತ್ರ ಬರೆದು ಪೋಸ್ಟ್ ಮಾಡಿದರು. ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರು 71 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ರಾಜಕೀಯವಾಗಿ ಉನ್ನತ ಹುದ್ದೆಗೇರಿ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿ ಸೇವಾ ಮತ್ತು ಸಮರ್ಪಣ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಈ ಅಭಿಯಾನ ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿ, 20 ದಿನಗಳ ಕಾಲ ನಡೆಯಲಿದೆ. ಈ 20 ದಿನಗಳ ಅಭಿಯಾನದ ಪ್ರಯುಕ್ತ ಬಿಜೆಪಿ ದೇಶಾದ್ಯಂದ ಸಾಮೂಹಿಕ ಸ್ವಚ್ಛತಾ ಕೆಲಸ ನಡೆಸಲಿದೆ. ಈ ವೇಳೆ ರಕ್ತದಾನ ಶಿಬಿರ ಸೇರಿ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಿದೆ. ಈ ದಿನವೇ ದಾವಣಗೆರೆ ಕಾಂಗ್ರೆಸ್ ನಿರುದ್ಯೋಗ ದಿನ ಆಚರಿಸಲಿದೆ.



