ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರದ ಐಟಿಒ ಉಗ್ರಾಣದಲ್ಲಿ 1.66 ಲಕ್ಷ ಮೂಲ್ಯದ ಮೂರು ಎಲ್ ಇಡಿ ಟಿವಿಗಳು ಕಳ್ಳತನವಾಗಿವೆ.
ಎಂದಿನಂತೆ ಉಗ್ರಾಣದ ಉಸ್ತುವಾರಿ ಶಿವಕುಮಾರ್ ಸಂಜೆ ಬೀಗ ಹಾಕಿಕೊಂಡು ಹೋಗಿದ್ದರು. ಆದರೆ, ವಿದ್ಯುತ್ ಕಂಟ್ರೋಲರ್ ಬಳಿ ಕಟ್ಟಡ ಏರಿ ಬಂದು ಉಗ್ರಾಣದ ಮೂರು ಟಿವಿ ಎತ್ತಿಕೊಂಡು ಹೋಗಿದ್ದಾರೆ ಎಂದು ಸಂಸ್ಥೆಯ ಜಂಟಿ ನಿರ್ದೇಶಕ ಅಂಜನಪ್ಪ ಟಿ ಅವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



