ಬೆಂಗಳೂರು: ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ (ಜೆಎಸ್ಎಸ್ಎಟಿಇ) ಬೆಂಗಳೂರು, ಮೈಸೂರು ಹಾಗೂ ನೋಯ್ಡಾದಲ್ಲಿರುವ ಜೆಎಸ್ಎಸ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ನಿಯಮಾನುಸಾರ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ವೃತ್ತಿ ಅನುಭವ, ಶೈಕ್ಷಣಿಕ ಅರ್ಹತೆ ಆಧರಿಸಿ ವೇತನ ನಿಗದಿಪಡಿಸಲಾಗುವುದು.
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನಗರವಾರು, ವಿಭಾಗ ಹಾಗೂ ವಿಷಯ ಆಧಾರಿತ ವಿವರ ಇಲ್ಲಿ ನೀಡಲಾಗಿದೆ. ಜೆಎಸ್ಎಸ್ಎಸ್ಟಿ, ಮೈಸೂರು: ಸಿವಿಲ್/ಸಿಟಿಎಂ, ಮೆಕಾನಿಕಲ್/ಐಪಿ, ಸಿಎಸ್ಇ/ಐಎಸ್ಇ, ಇ ಆಂಡ್ ಸಿ/ ಇ ಆಯಂಡ್ ಐಇ, ಪಾಲಿಮರ್ ಸೈನ್ಸ್ ಆಯಂಡ್ ಟೆಕ್ನಾಲಜಿ, ಫಿಜಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್, ಬಯೋಟೆಕ್ನಾಲಜಿ ಆಯಂಡ್ ಎಂಸಿಎ ವಿಭಾಗ.
ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ (ಜೆಎಸ್ಎಸ್ಎಟಿಇ), ಬೆಂಗಳೂರು:ಸಿವಿಲ್, ಕಂಪ್ಯೂಟರ್ ಸೈನ್ಸ್ ಆಯಂಡ್ ಇಂಜಿನಿಯರಿಂಗ್(ಸಿಎಸ್ಇ)/ ಇನ್ಫಮೇಷನ್ ಸೈನ್ಸ್ ಆಯಂಡ್ ಇಂಜಿನಿಯರಿಂಗ್ (ಐಎಸ್ಇ), ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್ (ಇ ಆಂಡ್ ಸಿ) /ಎಲೆಕ್ಟ್ರಾನಿಕ್ಸ್ ಆಯಂಡ್ ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ (ಇ ಆಂಡ್ ಐಇ) ವಿಭಾಗ.
ಜೆಎಸ್ಎಸ್ಎಟಿಇ, ನೋಯ್ಡಾ: ಸಿವಿಲ್, ಮೆಕಾನಿಕಲ್, ಸಿಎಸ್ಇ, ಇ ಆಂಡ್ ಸಿ, ಇಇ, ಎಂಬಿಎ, ಎಂಸಿಎ, ಮ್ಯಾಥಮೆಟಿಕ್ಸ್, ಫಿಜಿಕ್ಸ್ ಆಯಂಡ್ ಕೆಮಿಸ್ಟ್ರಿ ವಿಭಾಗ. ಅರ್ಜಿ ಸಲ್ಲಿಕೆ ವಿಧಾನ:ಪ್ರತಿ ನಗರದ ಹುದ್ದೆಗಳಿಗೂ ಪ್ರತ್ಯೇಕ ಅರ್ಜಿ ಸಲ್ಲಿಕೆ ಕೊಂಡಿ ನೀಡಲಾಗಿದ್ದು, ಅಭ್ಯರ್ಥಿಗಳು ಆ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. ಬೆಂಗಳೂರಿನ ಹುದ್ದೆಗೆ https://forms.gle/yQNSF9QN623KBE1J6, ಮೈಸೂರಿನ ಹುದ್ದೆಗೆ https://forms.gle/Ggcn64rAf4TM7HiG9, ನೋಯ್ಡಾದ ಹುದ್ದೆಗೆ https://forms.gle/EqhCoog8GFA3BQY67 ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು Director, Technical Education Division-JSS MVP, JSS Technical Institutions Campus, Mysuru570006 ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಕೊನೆ ದಿನ: 10.9.2021 ಹೆಚ್ಚಿನ ಮಾಹಿತಿಗೆ: https://jssateb.ac.in/ ವೆಬ್ ಸೈಟ್ ಗೆ ಭೇಟಿ ನೀಡಿ.