ಡಿವಿಜಿ ಸುದ್ದಿ, ಹರಪನಹಳ್ಳಿ: ಹರಪನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರ ವನ್ನಾಗಿ ರಚಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ಪಟ್ಟಣದಲ್ಲಿ ಪತ್ರ ಚಳವಳಿ ನಡೆಸಿದರು.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ಜಿಲ್ಲೆ ರಚಿಸುವುದಾದರೆ ಪಶ್ಚಿಮ ತಾಲೂಕು ಹರಪನಹಳ್ಳಿ ಯನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಿ ಘೋಷಿಸಬೇಕು. ಯಾವುದೇ ಕಾರಣಕ್ಕೂ ಹೊಸಪೇಟೆ ಜಿಲ್ಲೆಯನ್ನಾಗಿ ಮಾಡಬಾರದು. ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಒಳಗೊಂಡು ಹರಪನಹಳ್ಳಿ ಜಿಲ್ಲೆ ಮಾಡುವುದು ಸೂಕ್ತವಾಗಿದೆ. ಹರಪನಹಳ್ಳಿ ವಿಶಾಲ ಭೌಗೋಳಿಕ ಪ್ರದೇಶ, ರಾಜ್ಯ ಹೆದ್ದಾರಿ, ರೈಲು ಸಂಪರ್ಕ, ಐತಿಹಾಸಿಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅಲ್ಲದೇ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಕಚೇರಿ, ಡಿವೈಎಸ್ಪಿ ಮತ್ತು ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗ ಕೂಡ ಹೊಂದಿದೆ. ಹೀಗಾಗಿ ಹರಪನಹಳ್ಳಿ ಜಿಲ್ಲಾ ಕೇಂದ್ರ ವಾಗಲು ಸೂಕ್ತವಾಗಿದೆ. ಕೂಡಲೇ ಹರಪನಹಳ್ಳಿ ಜಿಲ್ಲೆ ಯನ್ನಾಗಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಚಾರ್ಯ ಸ್ವಾಮೀಜಿ, ಹಿರಿಯ ಸಾಹಿತಿ ಕುಂ.ಬಾ.ಸದಾಶಿವಪ್ಪ, ಜಿಲ್ಲಾ ಹೋರಾಟ ಸಮಿತಿಯ ಇದ್ಲಿ ರಾಮಪ್ಪ, ಹೆಚ್.ಎಂ.ಮಹೇಶ್ವರಸ್ವಾಮಿ,
ಹೊಸಹಳ್ಳಿ ಮಲ್ಲೇಶ್, ಗಂಗಾಧರ ಗುರುಮಠ, ವಕೀಲರಾದ ದೊಡ್ಡಮನಿ ಪ್ರಸಾದ್, ಶಿಕಾರಿ ಬಾಲಪ್ಪ, ಪಿರಂಗಿ ದುರುಗಪ್ಪ, ಪಿ.ಶಿವಕುಮಾರನಾಯ್ಕ,
ಗುರುಸಿದ್ದನಗೌಡ, ರಮೇಶನಾಯ್ಕ, ಶೃಂಗಾರದೋಟ ಬಸವರಾಜ್, ಸಣ್ಣ ಅಜ್ಜಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.