ಡಿವಿಜಿ ಸುದ್ದಿ, ಹರಿಹರ : ಬಿಎಸ್ ವೈ ಅವರ ಆಡಿಯೋ ನಕಲಿ. ಯಾರೋ ಈ ಅಡಿಯೋ ಸೃಷ್ಠಿಸಿ ಹರಿ ಬಿಟ್ಟಿದ್ದಾರೆ ಎಂದು ಸಚಿವ ಶ್ರೀ ರಾಮಲು ತಿಳಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧ್ವನಿಮುದ್ರಿಕೆ ಯಡಿಯೂರಪ್ಪ ಅವರದ್ದು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅದು ಯಡಿಯೂರಪ್ಪನವರ ಧ್ವನಿ ಅಲ್ಲ ಎಂಬುದು ನನಗೆ ನೂರಕ್ಕೆ ನೂರಷ್ಟು ಸ್ಪಷ್ಟವಾಗಿದೆ. ಈಗಾಗಲೇ ಆಡಿಯೋ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ನನ್ನ ವ್ಯಯಕ್ತಿಕ ಅಭಿಪ್ರಾಯ ಅಂದ್ರೆ ಇದೊಂದು ನಕಲಿ ಆಡಿಯೋ ಆಗಿರಬೇಕು ಎಂದು ಹೇಳಿದರು.
ಇತ್ತೀಚಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಉತ್ತಮ ಭಾವನೆ ವ್ಯಕ್ತ ಪಡಿಸುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಎರಡು ಪಕ್ಷಗಳ ಜೊತೆ ಸರ್ಕಾರ ಮಾಡಿದ್ದಾರೆ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಅವರಿಗೆ ಒಳ್ಳೆಯದನಿಸಿರಬಹುದು. ಹೀಗಾಗಿ ಬಿಜೆಪಿ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರಕ್ಕೆ ಯಾವುದೆ ಸಂಕಷ್ಟ ಇಲ್ಲ. ಉಳಿದ ಅವಧಿ ಪೂರ್ಣಗೊಳಿಸುತ್ತೇವೆ. ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ. ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆಂದರು.
ನಗಮೋಹನ್ ಮೋಹನದಾಸರ ವರದಿಯನ್ನು ಅನುಸರಿಸಿ ಶೇ. 7.5 ರಷ್ಟು ಎಸ್ಟಿ ಮೀಸಲಾತಿಯನ್ನು ಕೊಡಿಸುತ್ತೇನೆ ಎಂದರು.



