ಡಿವಿಜಿ ಸುದ್ದಿ, ಚಿತ್ರ ದುರ್ಗ:ಟ್ಟಿಪ್ಪು ಜಯಂತಿ ರದ್ದು ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅಂತವರು ಇನ್ನು 10 ಜನ ಸಿಎಂ ಬಂದರೂ ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ಟಿಪ್ಪು ಅಭಿಮಾನಿಗಳ ಮಹಾವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ಹೇಳಿದರು..
ಈ ಬಗ್ಗೆ ಸುದ್ದಿಗೋಷ್ಠಿಯಲಲ್ಲಿ ಮಾತನಾಡಿ, ಟಿಪ್ಪು ಜಯಂತಿ ದಿನ ನ. 10 ರಂದು ಈದ್ ಮಿಲಾದ್ ಹಬ್ಬವಿರುವ ಕಾರಣ 16 ಅಥವಾ 20ರಂದು ರಾಜ್ಯದಾದ್ಯಂತ ಖಾಸಗಿಯಾಗಿ ಆಚರಿಸುತ್ತೇವೆ. ಈ ಹಿಂದೆ ಯಡಿಯೂರಪ್ಪ ಅವರೇ ಟಿಪ್ಪು ಜಯಂತಿ ಆಚರಿಸಿದ್ದಾರೆ. ಈಗ ರಾಜಕೀಯ ಹಿತಾಸಕ್ತಿಗಾಗಿ ವಿರೋಧಿಸುವ ಮೂಲಕ ಸರ್ಕಾರದಿಂದ ಆಚರಣೆ ರದ್ದುಗೊಳಿಸಿದೆ.
ಜಯಂತಿ ರದ್ದುಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ಟಿಪ್ಪು ಕುರಿತ ಇತಿಹಾಸವನ್ನು ಪಠ್ಯ ಕ್ರಮದಿಂದಲೂ ತೆಗೆದು ಹಾಕಿಸಲು ತೀರ್ಮಾನಿಸುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಎಂ. ಜಯಣ್ಣ, ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್, ಜಮೀರ್, ಶಬ್ಬೀರ್ ಇದ್ದರು.



