ಡಿವಿಜಿ ಸುದ್ದಿ.ಕಾಂ
ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನವನ್ನು ಅನುಷ್ಟಾನಗೊಳಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ಕಾರ್ಯಕ್ಕೆ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸಹಿ ಮಾಡುವ ಮೂಲಕ ಚಾಲನೆ ನೀಡಿದ್ರು.
ಚಾಲನೆ ನಂತರ ಮಾತಾನಾಡಿ, ಜಿಲ್ಲೆಯಾದ್ಯಂತ ಜಲದ ಸಂರಕ್ಷಣೆ ಮತ್ತು ಪಾರಂಪರಿಕ ಜಲಮೂಲಗಳನ್ನು ರಕ್ಷಣೆ ಮಾಡುವ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರೆಲ್ಲರೂ ಸಹಿ ಮಾಡುವ ಮೂಲಕ ಪಾಲಿಕೆಯ ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.
ದೈನಂದಿನ ಚಟುವಟಿಕೆಗಳಲ್ಲಿ ಶುದ್ದ ಕುಡಿಯುವ ನೀರನ್ನು ಪ್ರತಿಯೊಬ್ಬರಿಗೆ ತಲುಪಿಸಲು ಆದ್ಯತೆ ನೀಡಲಾಗುವುದು. ಪ್ರಕೃತಿ, ಗಿಡ-ಮರಗಳ ಸಂರಕ್ಷಣೆ ಮತ್ತು ಬೆಳವಣೆಗೆ ನಮ್ಮ ಧ್ಯೇಯವಾಗಿದೆ. ಅಭಿಯಾನದ ನಂತರ ವಾಕ್‍ಥಾನ್, ಮ್ಯಾರಾಥಾನ್ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಕಾರ್ಯಪಾಲಕ ಅಭಿಯಂತರ ಆರ್.ಪಿ ಜಾಧವ್, ಮಂಜುನಾಥ್ ಗಿರಡ್ಡಿ, ನಾಗಭೂಷಣ್ ಹಾಗೂ ಪಾಲಿಕೆಯ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ರು.
ಹೆಚ್ಚಿನ ಸುದ್ದಿಗಾಗಿ ಭೇಟಿ ನೀಡಿ: www.dvgsuddi.com. ಡಿವಿಜಿ ಸುದ್ದಿ.ಕಾಂ ಸುದ್ದಿಗಾಗಿ ಸಂಪರ್ಕಿಸಿ: 7483892205, ಜಾಹೀರಾತಿಗಾಗಿ: 9844460336