ಡಿವಿಜಿ ಸುದ್ದಿ, ಹೊನ್ನಾಳಿ :ನೀವು ನೋಡ್ತೀರೋ ದೃಶ್ಯ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾರ್ಯ ಅವರದ್ದು. ಸಾಮಾನ್ಯವಾಗಿ ಈ ದೃಶ್ಯ ಯಾರೇ ನೋಡಿದ್ರೂ ಶಾಕ್ ಆಗುವಂತಿದೆ. ಜೆಸ್ಟ್ ನೋಡುವುದಕ್ಕೆ ಭಯಾನಕ ಎನ್ನಿಸುವ ಈ ದೃಶ್ಯ ಆಕಸ್ಮಿಕವಾಗಿ ಆದಂತಹದು.
ಈ ಘಟನೆ ನಡೆದಿದ್ದು ಹೊನ್ನಾಳಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ. ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಹೋರಿ ಮೈಮೇಲೆ ನುಗ್ಗಿ ಎಂ.ಪಿ ರೇಣುಕಾಚಾರ್ಯರು ಅವರಿಗೆ ಗುದ್ದಿದೆ.
ದಾವಣಗೆರೆ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷ ಸುರೇಂದ್ರ ನಾಯ್ಕ್, ಹೊನ್ನಾಳಿ ಬಿಜೆಪಿ ಮಂಡಲದ ಅಧ್ಯಕ್ಷ ಜೆಕೆ ಸುರೇಶ್, ಹೊನ್ನಾಳಿ ಬಿಜೆಪಿ ಮೀಡಿಯಾ ಮುಖ್ಯಸ್ಥ ಶಿವ ಹುಡೇದ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಂಜುನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ



