ದಾವಣಗೆರೆ: ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಆಗ್ರಹಿಸಿ ರೈಲ್ವೇ ನೇಮಕಾತಿ ಹೋರಾಟ ಸಮಿತಿ ಸದಸ್ಯರು ದಾವಣಗೆರೆಯಲ್ಲಿಂದು ಪ್ರತಿಭಟನೆ ನಡೆಸಿದ್ರು.
ದಾವಣಗೆರೆ ರೈಲ್ವೇ ನಿಲ್ದಾಣದ ಬಳಿ 200 ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಢಳಿತ ಮತ್ತು ನೈರುತ್ಯ ರೈಲ್ವೇ ವಲಯ ಅಧಿಕಾರಿಗೆ ಮನವಿ ಸಲ್ಲಿಸಿದ್ರು.
ತಮಿಳುನಾಡು ಮಹಾರಾಷ್ಟ್ರ ಆಂಧ್ರಪ್ರದೇಶ ರಾಜ್ಯಗಳಲ್ಲಿ ಆಯಾ ರಾಜ್ಯದವರಿಗೆ ಶೇ. 80 ರಷ್ಟು ಮೀಸಲಾತಿ ಇದೆ. ಅದೇ ಮಾದರಿಯಲ್ಲಿ ಒಟ್ಟು ಹುದ್ದೆಗಳಲ್ಲಿ ರಾಜ್ಯದವರಿಗೆ ಶೇ. 80 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ರು.
ಇದರಿಂದ ರಾಜ್ಯದ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ನಮ್ಮ ಸಂಸದರು ಮುಖ್ಯಮಂತ್ರಿ ಗಳು ರೈಲ್ವೇ ಸಚಿವರು ಈ ಬಗ್ಗೆ ಗಮನ ಹರಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿದ್ರು. ಹೋರಾಟ ಸಮಿತಿಯ ಸಂತೋಷ , ಶ್ರೀಕಾಂತ್ , ಪುರುಷೋತ್ತಮ, ಮಂಜುನಾಥ್, ಶಿವರಾಜ್, ಮಾರುತಿ, ನಾಗರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ರು.



