ದಾವಣಗೆರೆ: ಜಿಲ್ಲೆಯಲ್ಲಿಂದು 453 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಐವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ದಾವಣಗೆರೆ 266, ಹರಿಹರ 32, ಜಗಳೂರು 26, ಚನ್ನಗಿರಿ 46, ಹೊನ್ನಾಳಿ 63 , ಹೊರ ಜಿಲ್ಲೆಯಿಂದ 20 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 29,708ಕ್ಕೆ ಏರಿಕೆಯಾಗಿದೆ. ಇಂದು 453 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 26,194 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 301 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 3,213 ಸಕ್ರಿಯ ಕೇಸ್ ಗಳಿವೆ. ಹುಚ್ಚವ್ವನಹಳ್ಳಿಯ 65 ವರ್ಷದ ಮಹಿಳೆ, ಬಿಡಿ ಲೇಔಟ್ ನ 56 ವರ್ಷದ ಮಹಿಳೆ, 39 ವರ್ಷದ ದಾವಣಗೆರೆಯ ews ಕಾಲೋನಿಯ ಪುರುಷ, 45 ವರ್ಷದ ಚೌಕಿಪೇಟೆಯ ಪುರುಷ ಹಾಗೂ ಹರಿಹರದ 68 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.