ದಾವಣಗೆರೆ: ನಿನ್ನೆ ( 05) ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆ ಸುರಿದ್ದು, ಅಪಾರ ಪ್ರಮಾಣದ ಬೆಳೆ, ಮನೆಗಳಿಗೆ ಹಾನಿಯಾಗಿದೆ. ಹರಿಹರದಲ್ಲಿ ದಾಖಲೆಯ 57.35 ಮಿ. ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಸರಾಸರಿ 24.60 ಮಿ.ಮೀ ಮಳೆಯಾಗಿದೆ. ಒಟ್ಟಾರೆ 41.90 ಲಕ್ಷ ರೂ. ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಚನ್ನಗಿರಿ 17.31 ಮಿ.ಮೀ, ದಾವಣಗೆರೆ 17.56 ಮಿ.ಮೀ, ಹೊನ್ನಾಳಿ 17.9 ಮಿ.ಮೀ, ಹಾಗೂ ಜಗಳೂರು 12.9 ಮಿ.ಮೀ ಮಳೆಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 01 ಎಕರೆ ಅಡಕೆ ಬೆಳೆ ಹಾನಿಯಾಗಿದ್ದು, ಅಂದಾಜು 60 ಸಾವಿರ ನಷ್ಟ ಸಂಭವಿಸಿರುತ್ತದೆ. ಹರಿಹರ ತಾಲ್ಲೂಕಿನಲ್ಲಿ 604 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಅಂದಾಜು ರೂ.39.40 ಲಕ್ಷ. ಹೊನ್ನಾಳಿಯಲ್ಲಿ 0.20 ಎಕರೆ ಎಲೆ ಬಳ್ಳಿ ಬೆಳೆ ಹಾನಿಯಾಗಿದ್ದು, ಅಂದಾಜು 30 ಸಾವಿರ ರೂ., ನ್ಯಾಮತಿಯಲ್ಲಿ 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ.1 ಲಕ್ಷ. ಚನ್ನಗಿರಿ ತಾಲ್ಲೂಕಿನಲ್ಲಿ 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು 60 ಸಾವಿರ ರೂ. ಸೇರಿದಂತೆ ಜಿಲ್ಲೆಯಲ್ಲಿ ಮೇ. 05 ರ ಮಳೆಯಿಂದ ಒಟ್ಟು 41.90 ಲಕ್ಷ ರೂ. ಗಳ ನಷ್ಟದ ಅಂದಾಜು ಮಾಡಲಾಗಿದೆ.
ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



