ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಯಾವುದಾದ್ರೂ ಯುದ್ದ ಗೆದ್ರಾ..? ಇಲ್ಲಾ, ಓಲಂಪಿಕ್ ನಲ್ಲಿ ಪದಕ ಗೆದ್ರಾ ಅಂತಾ ಜೈಲಿನಿಂದ ಬಂದ ಡಿ.ಕೆ ಶಿವಕುಮಾರ್ ಸ್ವಾಗತಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ರು..
ದಾವಣಗೆರೆಯಲ್ಲಿ ಮಾತನಾಡಿದ ಅವರು, ಜೈಲಿನಿಂದ ಬಂದವರಿಗೆ ಅಷ್ಟು ದೊಡ್ಡ ಸ್ವಾಗತ ಕೋರತ್ತಾರೆ ಅಂದ್ರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಏನು ಅನ್ನಬೇಕು. ಪ್ರಕರಣ ಇನ್ನೂ ಕೋರ್ಟನಲ್ಲಿ ವಿಚಾರಣೆ ಇದೆ. ಅದು, ಜಾಮೀನಿನ ಮೇಲೆ ಹೊರಗೆ ಬಂದವರಿಗೆ ಈ ರೀತಿ ಸ್ವಾಗತನಾ ಅಂತಾ ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಯಾವುದೇ ತಪ್ಪು ಮಾಡಿಲ್ಲ ಅಂತಾ ಕಾಂಗ್ರೆಸ್ ನಾಯಕರು ಹೇಳುವುದಲ್ಲ, ನ್ಯಾಯಾಲಯ ಹೇಳಬೇಕು. ಕಾಂಗ್ರೆಸ್ ದಿವಾಳಿ ಆಗಿದೆ. ಅಲ್ಲಿಯೇ ಮೂರು ನಾಲ್ಕು ಗುಂಪುಗಳಿವೆ. ನಮ್ಮ ಸರ್ಕಾರ ಬರಲು ಅತೃಪ್ತ ಶಾಸಕರು ತ್ಯಾಗ ಮಾಡಿದ್ದಾರೆ. ಅವರಿಗೆ ಗೌರವ ಕೊಡುತ್ತೇವೆ.
ಕೋರ್ಟ ವಿಚಾರ ಮುಗಿದ ಬಳಿಕ ನೀಡಬೇಕಾದ ಗೌರವ ನೀಡಲಾಗುವುದು. ಇದರಲ್ಲಿ ಎರಡು ಮಾತೇ ಇಲ್ಲ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಪ್ಟ್ ಆಗಿದ್ದಾರೋ ಅಥವಾ ಹಾರ್ಡ ಆಗಿದ್ದಾರೋ ಗೊತ್ತಿಲ್ಲ.ಬಿಜೆಪಿ ಮಾತ್ರ ಹಾರ್ಡ ಆಗಿದೆ ಎಂದು ಹೇಳಿದರು