ಡಿವಿಜಿ ಸುದ್ದಿ, ಬೆಳಗಾವಿ: ಕೋಮುವಾದ ಎಂದರೆ ಏನು..? ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಯಾವ್ಯಾವ ವರ್ಗಕ್ಕೆ ಸಮುದಾಯ ಭವನ ನೀಡಿದ್ದಾರೆ. ಅದರಲ್ಲಿ ಎಷ್ಟು ತಾರತಮ್ಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗಿಂತ ದೊಡ್ಡ ಕೋಮುವಾದಿ ಮತ್ತೊಬ್ಬರಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ರು.
ಸಿದ್ದರಾಮಯ್ಯ ಅವರು ಕೋಮುವಾದಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಜೊತೆ ಹೋಗುವಂತಿದ್ದರೆ ಲೋಕಸಭೆ ಚುನಾವಣೆಗೆ ಮೊದಲೇ ಹೋಗುತ್ತಿದ್ದೆ. ಪ್ರಧಾನ ಮಂತ್ರಿಯೇ ನನಗೆ ಆಹ್ವಾನ ನೀಡಿದ್ದರು. ನನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ ಹೇಳಿದ್ದರು. ಪ್ರಧಾನಿ ಅವರು ಕರೆದಾಗಲೇ ಹೋಗಿಲ್ಲ, ಈಗ ಹೋಗ್ತಿವಾ..? ನಾನು ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲ್ಲ. ನನ್ನನ್ನು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಹೇಳಿದ್ದಾರೆ
ಕೋಮುವಾದ ಎಂದರೆ ಏನು, ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಎಷ್ಟು ತಾರತಮ್ಯ ಮಾಡಿದ್ದಾರೆ ಎನ್ನುವುದು ಎಲ್ಲಾರಿಗೂ ಗೊತ್ತಿದೆ. ಇವರಿಗಿಂತಲೂ ದೊಡ್ಡ ಕೋಮುವಾದಿ ಮತ್ತೊಬ್ಬರಿಲ್ಲ ಎಂದರು.
ಈಗ ಚುನಾವಣೆಗೆ ಹೋದರೆ, ಜನರನ್ನು ನೋಡುವವರು ಯಾರು? ಸರ್ಕಾರ ಬಿದ್ದು ಹೊಸ ಸರ್ಕಾರ ರಚನೆಯಾಲು ಐದು ತಿಂಗಳವರೆಗೆ ಜನ ಏನು ಮಾಡಬೇಕು. ಈ ಕಾರಣಕ್ಕೆ ನಾನು ಬಿಜೆಪಿ ಸರ್ಕಾರವನ್ನು ಬೀಳಲು ಬಿಡುವುದಿಲ್ಲ ಅಂತಾ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.