ಧಾರವಾಡ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನೂರಾರು ಜೀವಗಳನ್ನು ಬಲಿ ಪಡೆಯುತ್ತಿದ್ದು, ಪಬ್ಲಿಕ್ ಟಿವಿ ಆ್ಯಂಕರ್ ಅರುಣ ಬಡಿಗೇರ ತಂದೆ ಮತ್ತು ತಾಯಿ ಇಬ್ಬರೂ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೂರು ದಿನಗಳ ಹಿಂದೆ ಅರುಣ್ ಅವರ ತಾಯಿ ಕಸ್ತೂರಮ್ಮ ಬಡಿಗೇರ ಸಾವನ್ನಪ್ಪಿದ್ದರು. ಈಗ ಅವರ ತಂದೆ ಚಂದ್ರಶೇಖರ ಬಡಿಗೇರ (68) ಸಾವನ್ನಪ್ಪಿದ್ದಾರೆ. ನಿವೃತ್ತ ಶಿಕ್ಷಕರಾಗಿದ್ದ ಚಂದ್ರಶೇಖರ ಬಡಿಗೇರ ಧಾರವಾಡದಲ್ಲಿ ವಾಸವಾಗಿದ್ದರು. ಕೆಲ ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.



