ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 28,2021 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ https://www.dkmul.com/index.html ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಮೇ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವಿದ್ಯಾರ್ಹತೆ; ಬಿವಿಎಸ್ಸಿ, ಎಎಚ್, ಬಿಎಸ್ಸಿ, B.Tech, ಎಂಎಸ್ಸಿ,ಬಿ.ಇ, ಪದವಿ, ಎಂಜಿನಿಯರಿಂಗ್ ಡಿಪ್ಲೊಮಾ, ಬಿಕಾಂ, ಬಿಬಿಎಂ, ಎಂಬಿಎ, ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ : ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 5 ವರ್ಷಗಳ ವಯಸ್ಸಿನ ಮಿತಿಯನ್ನು ಎಸ್ಸಿ / ಎಸ್ಟಿ / ಪ್ರವರ್ಗ – 1 ರ ಅಭ್ಯರ್ಥಿಗಳಿಗೆ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ : ಅರ್ಜಿದಾರರು ಅರ್ಜಿ ಶುಲ್ಕವನ್ನು ರೂ.800 / -, ಎಸ್ಸಿ / ಎಸ್ಟಿ / ವರ್ಗ – 1 ಅಭ್ಯರ್ಥಿಗಳು ರೂ.500 / -ಮೇ 29, 2021 ರಂದು ಸಂಜೆ 5:30 ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು- 07
- ತಾಂತ್ರಿಕ ಅಧಿಕಾರಿ – 04
- ತಾಂತ್ರಿಕ ಅಧಿಕಾರಿ – 01
- ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) – 01
- ವಿಸ್ತರಣಾಧಿಕಾರಿ ಗ್ರೇಡ್ -3- 4 + 4 (ಇತರ ಅಭ್ಯರ್ಥಿಗಳು)
- ಡೈರಿ ಸೂಪರ್ ವೈಸರ್ ಗ್ರೇಡ್-2 – 05 ಪೋಸ್ಟ್ಗಳು
- ಆಡಳಿತ ಸಹಾಯಕರು ಗ್ರೇಡ್-2 – 10 ಹುದ್ದೆಗಳು
- ಕೆಮಿಸ್ಟ್ ಗ್ರೇಡ್ -2 – 12 ಹುದ್ದೆಗಳ
- ಲೆಕ್ಕಾಚಾರ ಸಹಾಯಕರು ಗ್ರೇಡ್-2- 02 ಹುದ್ದೆಗಳು
- ಕಿರಿಯ ತಂತ್ರಜ್ಞರು – 30 ಹುದ್ದೆಗಳು
- ಒಟ್ಟು 80 ಹುದ್ದೆಗಳು
- ವೇತನ: ತಿಂಗಳಿಗೆ ರೂ.21,400/- ರಿಂದ ರೂ.97,100 /-



