ದಾವಣಗೆರೆ: ಕೊರೊನಾ ಸೋಂಕಿನ ಎರಡನೇ ಅಲೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಸೋಂಕನ್ನು ನಿಯಂತ್ರಿಸಲು ಸರ್ಕಾರ 14 ದಿನದ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ. ಈ ವೇಳೆ ನಗರದ ಎಲ್ಲಾ ದೇವಸ್ಥಾನಗಳ ಬಾಗಿಲು 14 ದಿನಗಳ ಕಾಲ ಬಂದ್ ಆಗಿರಲಿವೆ. ಹೀಗಾಗಿ ಇಂದು ಅಖಿಲಭಾರತ ವೀರಶೈವ ಮಾಹಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ನೇತೃತ್ವದಲ್ಲಿ ನಗರದ ವಿವಿಧ ದೇವಸ್ಥಾನಗಳ 60 ಅರ್ಚಕರುಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವರಾಜ್ ದೇವರಮನಿ , ಮಹಾನಗರ ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ, ಕರಿವಪ್ಳರ ಸಿದ್ದೇಶ್, ಜಯಪ್ರಕಾಶ್ ಮಾಗಿ , ಶ್ರೀಕಾಂತ ನೀಲಗುಂದ, ಟಿಂಕರ್ ಮಂಜಣ್ಣ, ಅಭಿಷೇಕ್ ಪಿ ಎಳೆಹೋಳೆ, ದೇವೇಂದ್ರಪ್ಪ , ರುದ್ರೇಶ್ ಶಿವಾನಂದ ಬೆನ್ನೂರು ಇನ್ನಿತರರು ಉಪಸ್ಥಿತರಿದ್ದರು.



