ದಾವಣಗೆರೆ: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಇಂದಿನಿಂದ 14 ದಿನ ಕರೊನಾ ಕ ಕರ್ಫ್ಯೂ ಘೋಷಣೆ ಮಾಡಿದ್ದು, ಕೃಷಿ ಚಟುವಟಿಕಗೆ ಯಾವುದೇ ಅಡಚಣೆ ಇಲ್ಲ. ಮಧ್ಯಾಹ್ನ 02 ಗಂಟೆ ವರೆಗೆ ಕೃಷಿ ಸಂಬಂಧಿತ ಅಂಗಡಿಗಳು ತೆರೆದಿರಲಿವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜ್ ಲೋಕಿಕೆರೆ ರವರು ಹೇಳಿದ್ದಾರೆ.
ರೈತ ಬಾಂಧವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸರ್ಕಾರದ ನಿಯತಮ ಪಾಲಿಸಿ ಕೃಷಿ ಸಂಬಂಧಿತ ಅಗತ್ಯ ಪರಿಕರ ತಗೆದುಕೊಳ್ಳಬಹುದು. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳು 14 ದಿನದ ಕೊರೊನಾ ಕರ್ಫ್ಯೂ ಸಮಯದಲ್ಲೂ ಮಧ್ಯಾಹ್ನ 2 ಗಂಟೆ ವರೆಗೆ ತರೆದಿರಲಿವೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಅಥವಾ ಕೃಷಿ ಪರಿಕರ ಸಾಗಾಣಿಕೆಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ. ಕರ್ಫ್ಯೂ ನಿಯಮ ಪಾಲಿಸಿ ರೈತ ಬಾಂಧವರು ಅಗತ್ಯ ಪರಿಹಾರ ಕೊಂಡುಕೊಳ್ಳಿ ಎಂದು ಮನವಿ ಮಾಡಿದ್ದಾರೆ.



