ಡಿವಿಜಿ ಸುದ್ದಿ, ಹರಪನಹಳ್ಳಿ: ಬಿಜೆಪಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ಸತ್ತೂರು ಡಿ.ಆರ್.ಹಾಲೇಶ್ ಅವರು ಪುನರಾಯ್ಕೆಯಾಗಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ, ಬಿಜೆಪಿ ರಾಜ್ಯ ರೈತ
ಮೋರ್ಚಾ ಕಾರ್ಯದರ್ಶಿ ದತ್ತಾತ್ರೇಯ, ಜಿಲ್ಲಾ ಸಮಿತಿಯ ಕಡ್ಲೆಬಾಳು ಧನಂಜಯ,
ಜೀವನಮೂರ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸತ್ತೂರು ಡಿ.ಆರ್.ಹಾಲೇಶ್
ಅವರನ್ನು ಸರ್ವನುಮತದಿಂದ ಪುನರಾಯ್ಕೆ ಮಾಡಲಾಗಿದೆ.
ಬಿಜೆಪಿ ಅಧ್ಯಕ್ಷ ಕಲ್ಲಹಳ್ಳಿ ಕೆ.ಲಕ್ಷ್ಮಣ್ ಅವರು ಕಳೆದ ಮಾರ್ಚ್ 16 ರಂದು ವೈಯಕ್ತಿಕ
ಕಾರಣಗಳಿಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಲೋಕಸಭೆ ಚುನಾವಣೆ
ಹಿನ್ನಲೆಯಲ್ಲಿ ಸತ್ತೂರು ಹಾಲೇಶ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ
ಜಿಲ್ಲಾಧ್ಯಕ್ಷರು ಆದೇಶ ಹೊರಡಿಸಿದ್ದರು. ಇದೀಗ 7 ತಿಂಗಳ ನಂತರ ಪೂರ್ಣ ಪ್ರಮಾಣದ
ಅಧ್ಯಕ್ಷರಾಗಿ ಸತ್ತೂರು ಡಿ.ಆರ್.ಹಾಲೇಶ್ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ,
ರಾಘವೇಂದ್ರಶೆಟ್ಟಿ, ಸಣ್ಣಹಾಲಪ್ಪ, ಆರ್.ಲೋಕೇಶ್, ಕರಿಬಸಪ್ಪ, ಹೆಚ್.ಎಂ.ಕೊಟ್ರಯ್ಯ
ಇತರರು ಇದ್ದರು.