ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ ಸಂಜೆ (ಏಪ್ರಿಲ್ 22 ) ಸರಾಸರಿ 12.15 ಮಿ.ಮೀ ಮಳೆಯಾಗಿದ್ದು, 5.05 ಲಕ್ಷದಷ್ಟು ನಷ್ಟ ಸಂಭವಿಸಿದೆ.
ಚನ್ನಗಿರಿ14.16 ಮಿ.ಮೀ, ದಾವಣಗೆರೆ 5.58 ಮಿ.ಮೀ, ಹರಿಹರದಲ್ಲಿ 20.82 ಮಿ.ಮೀ, ಹೊನ್ನಾಳಿಯಲ್ಲಿ 17.1 ಮಿ.ಮೀ ಹಾಗೂ ಜಗಳೂರಿನಲ್ಲಿ 3.1 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸರಾಸರಿ 12.15 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುಡುಗು, ಸಿಡಿಲು ಹಾಗೂ ಭಾರೀ ಗಾಳಿ ಸಹಿತ ಮಳೆಯಾಗಿತ್ತು. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 02 ಮನೆಗಳು ಹಾನಿಯಾಗಿದ್ದು ಅಂದಾಜು ರೂ.40 ಸಾವಿರ ನಷ್ಟ ಸಂಭವಿಸಿದೆ. 50 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.4 ಲಕ್ಷ ಹಾನಿಯಾಗಿದ್ದು ತಾಲ್ಲೂಕಿನಲ್ಲಿ ಒಟ್ಟಾರೆ ರೂ.4.40 ಲಕ್ಷ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 01 ಮನೆ ಹಾನಿಯಾಗಿದ್ದು, ಅಂದಾಜು ರೂ.50 ಸಾವಿರ ನಷ್ಟ ಸಂಭವಿಸಿರುತ್ತದೆ. 01 ಜಾನುವಾರು ಜೀವ ಹಾನಿಯಾಗಿದ್ದು ರೂ 15 ಸಾವಿರ ಸಂಭವಿಸಿದ್ದು ತಾಲ್ಲೂಕಿನಲ್ಲಿ ಒಟ್ಟಾರೆ ರೂ. 65 ಸಾವಿರ ಸಂಭವಿಸಿರುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ರೂ.5.05 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.