ಡಿವಿಜಿ ಸುದ್ದಿ, ದಾವಣಗೆರೆ: ಉತ್ತಮ ಬರವಣಿಗೆ, ಸಾಮಾನ್ಯ ಕರ್ತವ್ಯ, ಬಂದೋಬಸ್ತ್ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ ಮಹಿಳಾ ಕಾನ್ ಸ್ಟೆಬಲ್ ಆರ್ ರೇಣುಕಾಮ್ಮ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ರೇಣುಕಮ್ಮ ಅವರು ಠಾಣೆಗೆ ಬಂದ ಸಾರ್ವಜನಿಕರೊಂದಿಗೆ ಸ್ನೇಹ, ಪ್ರೀತಿ ಮತ್ತು ಸೌಜನ್ಯಯುತವಾಗಿ ಮಾತನಾಡಿಸಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ರೀತಿ ಮುಂದುವರಿಸುವಂತೆ ಎಸ್ ಪಿ ಪ್ರಶಂಸನೀಯ ಎಂದು ಶ್ಲಾಘಿಸಿದ್ದಾರೆ.



