ಡಿವಿಜಿ ಸುದ್ದಿ,ದಾವಣಗೆರೆ: ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ವೃತ್ತದ ಗ್ರಾಮ ಲೆಕ್ಕಿಗ ಧರ್ಮಪ್ಪ ಅವರನ್ನು ಕರ್ತವ್ಯ ಲೋಪದ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಬೇಲಿಮಲ್ಲೂರು ವೃತ್ತದ ಗ್ರಾಮಗಳಿಗೆ ಪ್ರತಿನಿತ್ಯ ಭೇಟಿ ನೀಡುತ್ತಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳ ಸ್ಪಂದಿಸುತ್ತಿಲ್ಲ. ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ನೀಡುವ ದೃಢೀಕರಣ ಪತ್ರಗಳಿಗೆ ಸಕಾಲ ಯೋಜನೆಯಡಿ ವರದಿ ಸಲ್ಲಿಸಲು ಹಣದ ಬೇಡಿಕೆ ಇಡುತ್ತಿರುವ ಕುರಿತು ಅ.25 ರಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಹೊನ್ನಾಳಿ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



