ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾದ ಹಿನ್ನೆಲೆ ಈ ಬಾರಿಯ ಐತಿಹಾಸಿಕ ಬೆಂಗಳೂರು ಕರಗ ಅದ್ಧೂರಿ ಉತ್ಸವಕ್ಕೆ ಬ್ರೇಕ್ ಹಾಕಲಾಗಿದೆ.
ಈ ಬಗ್ಗೆ ಬಿಬಿಎಂಪಿ ಕರಗ ಉತ್ಸವ ಕುರಿತು ಮಹತ್ವದ ಸಭೆ ನಡೆಸಿದ್ದು, ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗಿರುವುದರಿಂದ ಅದ್ಧೂರಿ ಕರಗ ಉತ್ಸವಕ್ಕೆ ಆಚರಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮಾತ್ರ ಕರಗ ಉತ್ಸವ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದ,
ಪ್ರತಿ ವರ್ಷ ಧಾರ್ಮಿಕ ವಿಧಿ-ವಿಧಾನದೊಂದಿಗೆ ಬೆಂಗಳೂರು ಕರಗ ಮಹೋತ್ಸವ ವೈಭವಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಕಳೆದ ವರ್ಷವೂ ಕೊರೊನಾ ವೈರಸ್ ನಿಂದಾಗಿ ಕರಗ ಉತ್ಸವವನ್ನು ರದ್ದುಗೊಳಿಸಲಾಗಿತ್ತು. ಈ ಬಾರಿಯೂ ಅದ್ಧೂರಿ ಕರಗ ಉತ್ವವ ಇಲ್ಲದೆ ಸರಳವಾಗಿ ಆಚೆರಣೆ ನಡೆಯಲಿದೆ.