ಸಿರಿಗೆರೆ: ಶ್ರೀ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ದೈವೀ ಅಂಗಳದಲ್ಲಿ ಯುಗಾದಿ ಸಾಂಪ್ರಾದಾಯಿಕ ವೈಶಿಷ್ಟ್ಯಗಳ ಪ್ರಾಂಜಾಲ ಪರಂಪರೆಯಂತೆ ಬಿದಿಗೆ ಚಂದ್ರ ದರ್ಶನವನ್ನು ಶಿಷ್ಯರೊಂದಿಗೆ ವೀಕ್ಷಿಸಿದರು.

ಚಂದ್ರದರ್ಶನ ನಂತರ ಶ್ರೀ ಜಗದ್ಗುರುಗಳವರು ಐಕ್ಯ ಮಂಟಪಕ್ಕೆ ದಯಮಾಡಿಸಿ ಗುರುಪಿತಾಮಹ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಮತ್ತು ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ಶ್ರದ್ದಾ ಭಕ್ತಿಯ ನಮನಗಳನ್ನು ಸಲ್ಲಿಸಿ. ಆಗಮಿಸಿದ ನೂರಾರು ಶಿಷ್ಯರಿಗೆ ಬೇವು ಬೆಲ್ಲದ ಪ್ರಸಾದ ದಯಪಾಲಿಸಿದರು.



