ಬೀದರ್ : ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಹಿನ್ನೆಲೆ ಲಾಕ್ ಡೌನ್ ಡೌನ್ ಹೇರುವಂತೆ ಸಲಹಾ ಸಮಿತಿ ಸೂಚನೆ ನೀಡಿಲ್ಲ. ಸಲಹಾ ಸಮಿತಿಯಲ್ಲಿ ನಾನೂ ಇದ್ದು, ಈ ಬಗ್ಗೆ ಚರ್ಚೆ ಆಗಿಲ್ಲ. ಹೀಗಾಗಿ ಜನರು ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಕೋವಿಡ್ ಸ್ಥಿತಿಗತಿ ಬಗ್ಗೆರ ಚರ್ಚಿಸದಲು ಏಪ್ರಿಲ್ 18ರಂದು ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ಮೇ 2ರವರೆಗೆ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ.ಇನ್ನು ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ಮುಂದಿನ ತೀರ್ಮಾನಿಸುತ್ತೇವೆ. ಕೊರೊನಾ ತಡೆಗಟ್ಟಲು ಜನರ ಸಹಕಾರ ಅತ್ಯಗತ್ಯಬವಾಗಿದೆ



