ಕೊಪ್ಪಳ: ಈಶ್ವರಪ್ಪ ಮೆದುಳು ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಎಷ್ಟು ಹಣ ತೆಗೆದುಕೊಂಡಿದ್ದರು ಎಂದಯ ಈಶ್ವರಪ್ಪ ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದಾರೆ. ನಾನು ಹೇಗೆ ಕಾಂಗ್ರೆಸ್ ಪಾರ್ಟಿ ಸೇರಿದೆ ಅನ್ನೋದು ಈಶ್ವರಪ್ಪ ಗೊತ್ತಾ..? ಅವನೊಬ್ಬ ಪೆದ್ದ, ವನ ಮೆದುಳು, ನಾಲಿಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಕಿಡಿಕಾರಿದ್ದಾರೆ.
ನಾನು ಜೆಡಿಎಸ್ ನಿಂದ ಹೊರ ಹೋಗಿಲ್ಲ. ನನ್ನನ್ನು ಜೆಡಿಎಸ್ ನಿಂದ ದೇವೇಗೌಡ ಹೊರ ಹಾಕಿದರು. ಡಿಸಿಎಂ ಇದ್ದಾಗಲೇ ವಜಾ ಮಾಡಿದರು. ನಾನು ತಕ್ಷಣಕ್ಕೆ ಕಾಂಗ್ರೆಸ್ ಸೇರಿಲ್ಲ. ಒಂದು ವರ್ಷ ಅಹಿಂದ ಸಂಘಟನೆ ಮಾಡಿದೆ. ನಂತರ ಕಾಂಗ್ರೆಸ್ ಸೇರಿದ್ದೇನೆ. ಇದೆಲ್ಲ ಈಶ್ವರಪ್ಪ ಗೊತ್ತಿಲ್ಲ ಎಂದರು.



