ಹರಪನಹಳ್ಳಿ: ಕೊರೊನಾ 2ನೇ ಅಲೆ ಹಿನ್ನಲೆ ತಾಲೂಕಿನ ಶ್ರೀ ಕ್ಷೇತ್ರ ಉಚ್ಚoಗಿದುರ್ಗದ ಉಚ್ಚಂಗೆಮ್ಮ ದೇವಿ ಯುಗಾದಿ ಜಾತ್ರೆಗೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಭಕ್ತರು ದೇವಸ್ಥಾನಕ್ಕೆ ಬರದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಸಿಪಿಐ ಕಮ್ಮಾರ್ ನಾಗರಾಜ್ ತಿಳಿಸಿದ್ದಾರೆ.

ಪ್ರತಿ ವರ್ಷ ಯುಗಾದಿಗೆ ಹಾಲಮ್ಮನ ತೋಫಿನಲ್ಲಿ ಜಾತ್ರೆಯು ನಡೆಯುತ್ತಿತ್ತು. ಕೊರೊನಾ ವ್ಯಾಪಕ ಹರಡುತ್ತಿರುವುದರಿಂದ ಜಿಲ್ಲಾಡಳಿತ ಏ.12 ರಿಂದ ಎ.15 ರವರೆಗೆ ನಡೆಯುವ ಜಾತ್ರೆಯನ್ನು ನಿಷೇಧಿಸಿದೆ. ಹೀಗಾಗಿ ಈ ಬಾರಿ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಜಾತ್ರೆಯಲ್ಲಿ ಭಕ್ತರೂ ಗುಂಪು ಸೇರುವುದನ್ನು ತಪ್ಪಿಸಲು ಗ್ರಾಮವನ್ನು ಪ್ರವೇಶಿಸುವ ಅಣಜಿ ರಸ್ತೆ,ಹರಪನಹಳ್ಳಿ ರಸ್ತೆ,ಬೇವಿನಹಳ್ಳಿ ರಸ್ತೆ,ಹಾಲಮ್ಮನ ತೋಫಿನ ರಸ್ತೆ,ಅಣಜಿಗೆರೆ,ರಾಮಘಟ್ಟ ರಸ್ತೆ ಜೊತೆಗೆ ಗುಡ್ಡಕ್ಕೆ ಪ್ರವೇಶಿಸುವ ಹಳ್ಳಿನ ಗದ್ದೆ, ಪಾದಗಟ್ಟೆಯಿಂದ ಗುಡ್ಡಕ್ಕೆ ಪ್ರವೇಶ ನೀಡುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಗೇಟ್ ಹಾಕಿ ಯಾವುದೇ ಒಬ್ಬ ಭಕ್ತರೂ ಯುಗಾದಿ ಜಾತ್ರೆಗೆ ಬರದಂತೆ ನೋಡಿಕೊಳ್ಳಲು ಪೋಲಿಸ್ ಬಂದೋಬಸ್ತ್ ಮಾಡಲಾಗುತ್ತದೆ. ಈ ಬಾರಿ ಮನೆಯಲ್ಲಿಯೇ ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡಿದರು.



