ದಾವಣಗೆರೆ: ಸಾರಿಗೆ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದ್ದು, ಇಂದು 16 ಕೆಎಸ್ ಆರ್ ಟಿಸಿ ಬಸ್ ಗಳು ಕಾರ್ಯಾಚರಣೆ ಆರಂಭಿದ್ದು, 30 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ.
ಆರನೇ ವೇತನನ ಆಯೋಗದ ಅನ್ವಯ ವೇತನಕ್ಕೆ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಒಕ್ಕೂಟ ಕಳೆದ ಮೂರು ದಿನಗಳಿಂದ ರಾಜ್ಯದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ದಾವಣಗೆರೆಯಲ್ಲಿಯೂ ಕೂಡ ಮುಷ್ಕರಕ್ಕೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರಿಗೆ ನೌಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಪ್ರಯಾಣಿಕರು ಇಂದು ಕೂಡ ಪರದಾಟ ನಡೆಸಿದರು. ಸರ್ಕಾರ ಪರ್ಯಾಯವಾಗಿ ಖಾಸಗಿ ಬಸ್ ಓಡಿಸಲು ಮುಂದಾಗಿದ್ದರೂ ಖಾಸಗಿ ಬಸ್ ಮತ್ತು ಪ್ರಯಾಣಿಕರ ನಡುವೆ ಅಲ್ಲಲ್ಲಿ ಕಿರಿಕ್ ಸಾಮಾನ್ಯವಾಗಿದೆ. ಇದರ ಮಧ್ಯೆ ದಾವಣಗೆರೆ ವಿಭಾಗದಿಂದ 16 ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ.
ಈ ಬಗ್ಗೆ ಡಿವಿಜಿ ಸುದ್ದಿಗೆ ಮಾಹಿತಿ ನೀಡಿದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಎನ್. ಹೆಬ್ಬಾಳ್, ಸಾರಿಗೆ ನೌರರ ಪ್ರತಿಭನೆ ಮೂರನೇ ದಿನವೂ ಮುಂದುವರೆದಿದೆ. ಇಂದು 30 ಸಿಬ್ಬಂದಿ ಹಾಜರಾಗಿದ್ದಾರೆ. 16 ಬಸ್ ಗಳು ಕಾರ್ಯಾಚರಣೆ ಆರಂಭವಿಸಿವೆ. 40 ಟ್ರೈನಿಗಳಿಗೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ 12 ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ನಾಳೆಯಿಂದ ಮತ್ತೊಷ್ಟು ಸಿಬ್ಬಂದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ದಾವಣಗೆರೆ ವಿಭಾಗದಲ್ಲಿ ದಾವಣಗೆರೆ-1, ದಾವಣಗೆರೆ -2 ಹಾಗೂ ಹರಿಹರ ಘಟಕಗಳನ್ನು ಒಳಗೊಂಡಿದ್ದು, 1135 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇಂದು 30 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಕಳೆದ ಮೂರು ದಿನದಿಂದ ಬಸ್ ಓಡದಿರುವುದರಿಂದ ಪ್ರತಿ ದಿನ 35 ಲಕ್ಷದಂತೆ ಮೂರು ದಿನಕ್ಕೆ ಒಟ್ಟು 1.5 ಕೋಟಿಯಷ್ಟು ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.



