ಬೆಂಗಳೂರು: ಕೇಂಸ್ರ ಸರ್ಕಾರ ರಸ ಗೊಬ್ಬರ ಬೆಲೆಯನ್ನು ಏಕಾಏಕಿ ಏರಿಕೆ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು ಗುಲಾಮರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ರಸ ಗೊಬ್ಬರ ಬೆಲೆ ಏರಿಕೆ ಪ್ರಶ್ನಿಸಿದವರು ರಾಜ್ಯಕ್ಕೆ ಅಷ್ಟೆ ಅಲ್ಲ, ಭೂಮಿ ಭಾರ. ಮೊದಲು ಇಂತಹ ರ್ಕಾರ ಕಿತ್ತೆಸೆಯದಿದ್ದರೆ ದೇಶ. ಜಗತ್ತಿನಲ್ಲಿ ತಲೆ ಎತ್ತಿ ನಡೆಯಲಾಗದ ಸ್ಥಿತಿಗೆ ತಲುಪುತ್ತದೆ ಟೀಕಿಸಿದ್ದಾರೆ.
ರಸ ಗೊಬ್ಬರಕ್ಕೆ ಈ ಬಾರಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ 54,417 ಕೋಟಿ ಸಬ್ಸಿಡಿ ಕಡಿಮೆ ಮಾಡಿದೆ. ಕಳೆದ ವರ್ಷ 1,33,947 ಕೋಟಿ ಸಬ್ಸಿಡಿ ನೀಡಲಾಗಿತ್ತು. ಅದನ್ನು ಶೇ 40.62ರಷ್ಟು( 7,9530 ಕೋಟಿ) ಕಡಿಮೆ ಮಾಡಿದ್ದಾರೆ. ಆದ್ದರಿಂದ ಏಪ್ರಿಲ್ 1ರಿಂದ ರಸಗೊಬ್ಬರ ಬೆಲೆ ಹೆಚ್ಚಾಗಿದೆ ಎಂದಿದ್ದಾರೆ.
ದೇಶದ ಜಿಡಿಪಿಗೆ ಈ ವರ್ಷ ಕೃಷಿ ಶೇ 20ರಷ್ಟು ಕೊಡುಗೆಯನ್ನು ಕೃಷಿ ಕೊಟ್ಟಿದೆ. ಈ ಸಂದರ್ಭದಲ್ಲಿ ಈ ಮೋದಿ ಸರ್ಕಾರ, ರಸಗೊಬ್ಬರದ ಬೆಲೆಯನ್ನು ಶೇ 60ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1ರಿಂದ ಕ್ವಿಂಟಲಿಗೆ 1,400ಗಳಷ್ಟು ಬೆಲೆ ಜಾಸ್ತಿಯಾಗಿದೆ. ಇದುವರೆಗೆ 2,400 ಇದ್ದ ಬೆಲೆ ಈಗ ₹ 3,800 ಆಗಿದೆ. ಎನ್.ಪಿ.ಕೆ ಮೇಲಿನ ಬೆಲೆ ಒಂದು ಕ್ವಿಂಟಲ್ಗೆ 1,250 ಹೆಚ್ಚಳವಾಗಿದೆ. ಇದುವರೆಗೆ ₹ 2,350ಗೆ ಸಿಗುತ್ತಿದ್ದ ಗೊಬ್ಬರ ಈಗ 3,600 ಆಗಲಿದೆ. ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ ಎನ್ನುತ್ತಿದೆ. ಇದು ಶುದ್ಧ ಸುಳ್ಳು ಎಂದಿದ್ದಾರೆ.