ದಾವಣಗೆರೆ: 6ನೇ ವೇತನ ಆಯೋದ ಅನ್ವಯ ವೇತನ ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದು, ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ದಾವಣಗೆರೆಯಲ್ಲಿಯೂ ಎರಡನೇ ದಿನವೂ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಸಿದ್ದೇಶ್ ಎನ್ ಹೆಬ್ಬಾಳ್, 40 ಟ್ರೈನಿ ನೌಕರಿಗೆ ಇಂದು ನೋಟಿಸ್ ನೀಡಿದ್ದಾರೆ. ಕರೆ ಪತ್ರ ತಲುಪಿದ ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ತಪ್ಪಿದಲ್ಲಿ ಟ್ರೈನಿ ಹುದ್ದೆಗೆ ನಿಮಗೆ ಕೆಲಸಕ್ಕೆ ಹಾಜರಾಗಲು ಆಸಕ್ತಿ ಇಲ್ಲ ಎಂದು ಪರಿಗಣಿಸಿ ಹುದ್ದೆಯಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ
ಟ್ರೈನಿ ನೇಮಕಾತಿಯಲ್ಲಿ ಸರ್ಕಾರದ ನಿಯಮ, ನಿಬಂಧನೆಗೆ ಒಳಪಡುವುದಾಗಿ ಒಪ್ಪಿದ್ದೀರಿ. ಇದೀಗ ಕೆಲಸಕ್ಕೆ ಹಾಜರಾಗದಿದ್ದರೆ, ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ದಾವಣಗೆರೆ ವಿಭಾಗದ ದಾವಣಗೆರೆ-1,ದಾವಣಗೆರೆ -2 ಹಾಗೂ ಹರಿಹರ ಘಟಕದಿಂದ 40 ಟ್ರೈನಿ ನೌಕರು ನೋಟಿಸ್ ತಪಿತ ತಕ್ಷಣವೇ ಕೆಸಲಕ್ಕೆ ಹಾಜರಾಗಬೇಕು ಎಂದು ಎಚ್ಚರಿಸಿದ್ದಾರೆ. 40 ಹುದ್ದೆಯಲ್ಲಿ ಚಾಲಕರು, ನಿರ್ವಹಕರು, ತಾಂತ್ರಿಕ ಸಹಾಯಕ, ಶುಲಕರ್ಮಿ ಸಿಬ್ಬಂದಿಗಳಿದ್ದಾರೆ.



