ಬೆಂಗಳೂರು: ಅಹಿಂಸಾ ತತ್ವದ ಅಡಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮುದುವರಿಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಏನಿದ್ದರೂ 6ನೇ ವೇತನ ಆಯೋಗ ಜಾರಿ ಮಾಡಬೇಕು ಎನ್ನುವುದಾಗಿದೆ. ಇದರ ಹೊರತಾಗಿ ದೋಷ ಪೂರಿತವಾದ 8 ಬೇಡಿಕೆ ಈಡೇರಿಕೆ ಬಗ್ಗೆ ನಾವು ಏನನ್ನೂ ಮಾತನಾಡಲ್ಲ. ಬೇಡಿಕೆ ಈಡೇರಿಕೆ ಆಗುವವರೆಗೂ ಹೋರಾಟ ಮುಂದುವರಿಯಲಿದೆ. ಅದು ಅನಿರ್ದಿಷ್ಟ ಅವಧಿಯಾಗಲಿದೆ ಎಂದರು.
ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಸರ್ಕಾರಕ್ಕೆ ಮಠ ಮಾನ್ಯಗಳಿಗೆ ಅನುದಾನ ನೀಡಲು ಹಣವಿದೆ. ಆದರೆ, ಸಾರಿಗೆ ನೌಕರಿಗೆ ಅನುದಾನ ನೀಡಲು ಹಣವಿಲ್ಲ. ಎಸ್ಮಾ ಜಾರಿಗೆ ಏನು ಉಲ್ಲಂಘನೆಯಾಗಿದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲಿ ಎಂದರು.