ಬೆಂಗಳೂರು: ನಾಳೆ (ಏ.7) ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಬೆಂಗಳೂರಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ನಾಳೆ 144 ಸೆಕ್ಷನ್ ಜಾರಿಯಾಗಿದ್ದು, ನಗರದಲ್ಲಿ ಸಾರ್ವಜನಿಕರು ಗುಂಪು ಸೇರುವಂತಿಲ್ಲ. ಯಾವುದೇ ರ್ಯಾಲಿ, ಧರಣಿ, ಸಾರ್ವಜನಿಕ ಸಮಾರಂಭ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ. ರಾಜ್ಯದಲ್ಲಿ ಏ. 21 ವರೆಗೆ ರಾಜ್ಯದಲ್ಲಿ ಕೋವಿಡ್ ಪ್ರೊಟೋಕಾಲ್ ಜಾರಿಯಲ್ಲಿ ಇರಲಿದ್ದು, ಯಾರಿಗೂ ಪ್ರತಿಭಟನೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಬಂಧಿಸಿ ಜಡ್ಜ್ ಮುಂದೆ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಬಾರಿ ಪ್ರತಿಭಟನಾಕಾರರನ್ನು ಬಂಧಿಸಿ ಮುಂದೆ ಹೋಗಿ ಬಿಡಲ್ಲ .ನಾಳೆ ಪ್ರತಿಭಟನೆ ಮಾಡಿ ಬಸ್ , ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ರೆ ಅರೆಸ್ಟ್ ಮಾಡ್ತೇವೆ.ಪ್ರತಿಭಟನೆ ಬಗ್ಗೆ ಇದುವರೆಗೆ ಯಾರು ಅನುಮತಿ ಕೇಳಿಲ್ಲ. ಕೋವಿಡ್ ನಿಯಮ ಜಾರಿಯಲ್ಲಿ ಇರುವುದರಿಂದ ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.