ಹೊಸಪೇಟೆ: ಹಕ್ಕ-ಬುಕ್ಕರ ನೆನಪಿಗಾಗಿ ಹಂಪಿಯಲ್ಲಿ ಏ. 18ರಂದು ಹಾಲುಮತ ಸಮಾಜ ಆಯೋಜಿಸಿದ್ದ ವಿಜಯನಗರ ಸಂಸ್ಥಾಪನಾ ದಿನ ಕಾರ್ಯಕ್ರಮ ವಿರೋಧಿಸಿ ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದ ಸದಸ್ಯರು ಇಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಕುರುಬರು ಹಾಗೂ ವಾಲ್ಮೀಕಿ ಸಮಾಜದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಕುತಂತ್ರದಿಂದ ಎರಡು ಸಮುದಾಯಗಳ ನಡುವೆ ಒಡಕು ಉಂಟು ಮಾಡಲು ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಇದರಿಂದ ಎರಡೂ ಸಮುದಾಯ ಘರ್ಷಣೆಗೆ ಇಳಿಯಬಹುದು. ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅವಕಾಶ ನೀಡದೇ, ಸೌಹಾರ್ದ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬಾರದು. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದಹಕ್ಕ-ಬುಕ್ಕರ ಕಾರ್ಯಕ್ರಮ ನಡೆಸಿದ್ರೆ, ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಹಶೀಲ್ದಾರ್ ಮೂಲಕ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ ಶ್ರವಣ್ ಅವರಿಗೆ ಮನವಿ ಸಲ್ಲಿಸಿದರು.
ಒಂದೆಡೆ ಹಕ್ಕ-ಬುಕ್ಕರು ಹಾಲುಮತ ಸಮಾಜಕ್ಕೆ ಸೇರಿದ್ದಾರೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ವಾಲ್ಮೀಕಿ ಸಮಾಜ ಕೂಡ ಹಕ್ಕ-ಬುಕ್ಕರು ನಮಗೆ ಸೇರಿದವರು ಎನ್ನುತ್ತಿದ್ದಾರೆ. ಇದರಿಂದ ಎರಡು ಸಮಾಜದ ನಡುವೆ ಸಂಘರ್ಷ ಏರ್ಪಟ್ಟಿದೆ.
ಕನಕಗುರು ಪೀಠದ ಶಾಖಾ ಮಠದ ಪೀಠಾಧಿಪತಿ ಸಿದ್ದರಾಮನಂದಪುರಿ ಸ್ವಾಮೀಜಿ , ಇತ್ತೀಚೆಗೆ ಸಭೆ ನಡೆಸಿ, ಏ. 18ರಂದು ಹಕ್ಕ ಬುಕ್ಕರ ನೆನಪು ಹಾಗೂ ಹಾಲುಮತ ಸಂಸ್ಕೃತಿ ಬಿಂಬಿಸುವ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಗುವುದು ಎಂ ತಿಳಿಸಿದ್ದರು.



