ಬೆಂಗಳೂರು: ಯಡಿಯೂರಪ್ಪನವರು ಕೆಲವರನ್ನು ತುಂಬಾ ನಂಬುತ್ತಾರೆ. ಇದೇ ಆವತ್ತಿನ ಕೆಜೆಪಿ ಕಟ್ಟಲು ಕಾರಣ. ಈಗಲೂ ಅದೇ ರೀತಿಯಾಗಿದೆ ಎಂಬುದು ನನ್ನ ಅಭಿಪ್ರಾಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು. ನಾನು ಪಕ್ಷದ ರೆಬಲ್ ಅಲ್ಲ, ಲಾಯಲ್; ನನ್ನ ವಿರುದ್ಧ ಸಹಿ ಸಂಗ್ರಹಕ್ಕೆ ಬಗ್ಗಲ್ಲ; ಮತ್ತೆ ಸಿಎಂ ವಿರುದ್ಧ ಈಶ್ವರಪ್ಪ ಗರಂ
ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಮತ್ತು ಹೈಕಮಾಂಡ್ ಗೆ ದೂರು ನೀಡಿದ ಬಳಿಕೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಎಸ್ ವೈ ಕೆಜೆಪಿ ಶುರು ಮಾಡಬೇಕು ಎಂದಾಗ ನಾನು ಬೇಡ ಅಂದೆ. ಆಗ ನಾವು ಬಿಸಿನೆಸ್ ಪಾರ್ಟ್ನರ್ ಆಗಿದ್ದೆವು. ಚುನಾವಣೆಯಲ್ಲಿ ಅವರಿಗೆ 6 ಸ್ಥಾನ ಬಂತು ನಮಗೆ 40 ಸ್ಥಾನ ಬಂತು. ಆ ನಂತರ ಮತ್ತೆ ಅವರ ಮಗನ ಮೂಲಕ ಮತ್ತೆ ಬಿಜೆಪಿಗೆ ಬರುತ್ತೇವೆ ಎಂದರು. ಆಗ ನೋಡಿ ಹೋಗಿ ವಾಪಸ್ ಬರುವುದು ಎಷ್ಟು ಸಮಸ್ಯೆ ಎಂದು ನಾನು ಹೇಳಿದ್ದೆ.
ಅದಕ್ಕೆ ಅವರು ನೀವು ಪಾರ್ಟಿ ಕಟ್ಟಿ ನಾವು ಜೊತೆ ಇರುತ್ತೇವೆ ಎಂದು ಕೆಲವು ಹೇಳಿದ್ದರಂತ. ಆದರೆ ಪಾರ್ಟಿ ಕಟ್ಟಿದ ಮೇಲೆ ಯಾರೂ ಬರಲಿಲ್ಲ. ಯಡಿಯೂರಪ್ಪನವರು ಕೆಲವರನ್ನು ತುಂಬಾ ನಂಬಿದ್ದಾರೆ. ಅದೆ ಆವತ್ತಿನ ಕೆಜೆಪಿ ಕಟ್ಟಲು ಕಾರಣ. ಈಗಲೂ ಅದೇ ರೀತಿಯಾಗಿದೆ ಎನ್ನುವುದೇ ನನ್ನ ಅಭಿಪ್ರಾಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಕೆಲವು ಕಡೆ ನನ್ನ ಮತ್ತು ಬಿಎಸ್‌ವೈ ಮಧ್ಯೆ ಬಿರುಕು ಎಂದು ಸುದ್ದಿಯಾಗಿದೆ. ಇದಕ್ಕೆ ನಾನು ಪಕ್ಷದ ವಿರುದ್ದ ರೆಬಲ್ ಎಂದು ಹೇಳುತ್ತಿದ್ದಾರೆ. ನಾನು ರೆಬಲ್ ಅಲ್ಲ ನಾನು ಪಕ್ಷಕ್ಕೆ ಲಾಯಲ್. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಬದಲಾವಣೆ ಆಗಬೇಕು ಎಂದೆಲ್ಲ. ಶಾಸಕರು ಸಹಿ ಸಂಗ್ರಹಕ್ಕೆ ನಾನು ಜಗ್ಗುವುದಿಲ್ಲ. ಕೆಲವರು ಸುದ್ದಿಗೋಷ್ಠಿ ಮಾಡಿದ್ದಾರೆ. ಆದರೆ ಸುದ್ದಿಗೋಷ್ಠಿ ನಂತರ ನನಗೆ ಕರೆ ಮಾಡಿ ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದಿದ್ದಾರೆ ಎಂದು ಹೇಳಿದರು.



