ದಾವಣಗೆರೆ: ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಏ.02ರಂದು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಎಂದು ಸಂಘದ ಅಧ್ಯಕ್ಷ ವೈ ವಿರೂಪಾಕ್ಷಪ್ಪ ಕುಂಬಳೂರು ತಿಳಿಸಿದರು.
ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಏ.02ರಂದು ನಗರ ತ್ರಿಶೂಲಾ ಕಲಾ ಭವನದಲ್ಲಿ ದಿ. ಕೆ. ಮಲ್ಲಪ್ಪ ವೇದಿಕೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ , ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಶ್ರೀ ತಿಂಥಣಿ ಮಠದ ಸಿದ್ಧರಾಮನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಶಾಸಕರಾದ ಶಾಮನೂರು ಶಿವಶಂಕರ್, ಶಾಸಕ ಎಸ್. ಎ ರವೀಂದ್ರನಾಥ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಸ್.ಎಸ್. ಮಲ್ಲಿಕಾರ್ಜುನ , ಡಾ. ಉದಯಶಂಕರ್ ಒಡೆಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಮಾಜ ಎಲ್ಲಾ ಮುಖಂಡರು ಅರ್ಥಿಕ ಸಹಾಯ ಮಾಡಿದ್ಧಾರೆ ಎಂದರು.
ನಗರದ ಕುರುಬ ವಿದ್ಯಾವರ್ಧಕ ಸಂಘದ ಮುಂದೆ ಇದ್ದ ಜಾಗವನ್ನು ವಾಣಿಜ್ಯ ಮಳಿಗೆಯಾಗಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಎಂಐಟಿ ಬಳಿ ಸಂಘದ ಹೆಸರಿನಲ್ಲಿ ಇರುವ 5 ಎಕೆರೆ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಿ, ಈಗಿರುವ ಜಾಗವನ್ನು ಸಂಪೂರ್ಣವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಕೆ. ಉದ್ದಗಟ್ಟಿ, ಪ್ರಧಾನ ಕಾರ್ಯದರ್ಶಿ ಎಸ್. ಎಚ್.ಪ್ರಕಾಶ್ ಮಳಲಕೆರೆ, ನಿರ್ದೇಶಕರಾದ ಶಶಿಧರ್, ಲಿಂಗರಾಜ್ ಬಿ, ಬೀರಪ್ಪ ಬಿಕೆ, ಮಾಲತೇಶ್ ಇದ್ದರು.



