ದಾವಣಗೆರೆ: ಹರಿಹರ ವೀರಶೈವ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಹರಿಹರದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ , ಹಿಂದಿಯಲ್ಲಿ ಮಾತನಾಡಿದ್ರೆ, ಸಮಾಜ ಉದ್ಧಾರ ಆಗುವುದಿಲ್ಲ. ಪ್ರಸಂಗ ಬಂದ್ರೆ, ಹರಿಹರ ತಾಲೂಕಿನಲ್ಲಿ ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಶಾಖಾ ಮಠ ಆರಂಭಿಸುತ್ತೇವೆ. ಕೆಲವರನ್ನ ಜಾಗಾ ಖಾಲಿ ಮಾಡಿಸುವೆ ಎಂದು ಪರೋಕ್ಷವವಾಗಿ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇಂಗ್ಲಿಷ್, ಹಿಂದಿಯಲ್ಲಿ ಮಾತಾಡುತ್ತಾ, ಲಂಗೋಟಿ ಹಾಕಿಕೊಂಡರೇ ಸಮಾಜ ಉದ್ದಾರ ಆಗಲ್ಲ. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟವನ್ನು ನಮ್ಮ ಜೊತೆಗೆ ಇದ್ದ ಕಾವಿಧಾರಿಗಳು ಮಾಡಿದ್ದರು. ಪೀಠಾಧಿಪತಿಗಳಾದವರು ಅರಿಷಡ್ವರ್ಗಗಳನ್ನು ತೊರೆದಿರಬೇಕು. ನಾಳೆ ಹೋಳಿ ಹಬ್ಬ ಬಂದಿದೆ. ಬಣ್ಣ ಹಚ್ಚಿಕೊಂಡು ಹೋಳಿ ಆಡುವ ಸ್ವಾಮಿ ನಮಗೆ ಬೇಡ. ಹರಿಹರದಲ್ಲಿ ಅವಶ್ಯಕತೆ ಬಂದ್ರೆ ಶಾಖಾ ಪೀಠ ಮಾಡುತ್ತೇವೆ. ಸ್ವಾಮೀಜಿಗಳಾದವರು ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು ಎಂದರು.