ಡಿವಿಜಿ ಸುದ್ದಿ, ದಾವಣಗೆರೆ: ನಗರದ ಪ್ರತಿಷ್ಠಿತ ರಸ್ತೆಯಲ್ಲಿ ಒಂದಾಗಿರುವ ಎವಿಕೆ ಕಾಲೇಜು ರಸ್ತೆಯ ಬಟ್ಟೆ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಎವಿಕೆ ಕಾಲೇಜು ರಸ್ತೆಯಲ್ಲಿ ಎಒನ್ ಕಲೆಕ್ಷನ್ ಹಾಗೂ ಲಕ್ಕಿ ಬ್ಯಾಗ್ ಅಂಗಡಿಯ ಅಂಗಡಿಯ ಶೀಟ್ ಮುರಿದು ಕಳ್ಳತನ ಮಾಡಿದ್ದಾರೆ.
2 ಸಾವಿರ ರೂಪಾಯಿ ಕ್ಯಾಶ್ ಮತ್ತು 20 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಬಟ್ಟೆಯನ್ನು ಕಳ್ಳತನ ಮಾಡಲಾಗಿದೆ. ಗೌಸ್ ಪೀರ್ ಹಾಗೂ ಸುನಿಲ್ ಎಂಬುವರಿಗೆ ಸೇರಿದ ಬಟ್ಟೆ ಮತ್ತು ಬ್ಯಾಗ ಅಂಗಡಿಗಳಾಗಿವೆ. ಬಡಾವಣೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




