ದಾವಣಗೆರೆ: ದಾವಣಗೆರೆ ಮಹನಾಗರ ಪಾಲಿಕೆ ವಾರ್ಡ್ ನಂ. 20 ಮತ್ತು 22ರಲ್ಲಿ ಮಾ.29 ರಂದು ಉಪ ಚುನಾವಣೆ ನಡೆಯಲಿದ್ದು, ಇಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಭರ್ಜರಿ ಪ್ರಚಾರ ನಡೆಸಿದರು.
ಎರಡೂ ವಾರ್ಡ್ ನ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆದಿದರು. ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರಚಾರಕ್ಕೆ ಸಾಥ್ ನೀಡಿದರು.

ಪ್ರಚಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿದ್ದಾರೆ. ಹೀಗಾಗಿ ಇಷ್ಟು ಜನ ಸೇರಿದ್ಧಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವಲ್ಲಿ ಅನುಮಾನ ಇಲ್ಲ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಲಿದೆ ಎಂದರು.
ಕಾಂಗ್ರೆಸ್ ಸದದ್ಯರಾಗಿದ್ದ 20ನೇ ವಾರ್ಡ್ ನ (ಭಾರತ್ ಕಾಲೋನಿ) ನ ಯಶೋಧಮ್ಮ( 2020) ಹಾಗೂ 22 ನೇ ವಾರ್ಡ್ ನ (ಯಲ್ಲಮ್ಮನಗರ) ದೇವರಮನಿ ಶಿವಕುಮಾರ್ (2021) ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹಿನ್ನೆಲೆ ಉಪ ಚುನಾವಣೆ ಎದುರಾಗಿದೆ. ಮಾ. 29 ರಂದು ಚುನಾವಣೆ ನಡೆಯಲಿದ್ದು, 31 ರಂದು ಫಲಿತಾಂಶ ಹೊರ ಬೀಳಲಿದೆ.



