ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ 20 ಮತ್ತು 22ನೇ ವಾರ್ಡ್‍ಗಳಿಗೆ ನಡೆವ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಇಂದು ಕಾಂಗ್ರೆಸ್ ಹಿರಿಯ ಮುಖಂಡ , ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪ್ರಚಾರ ಕೈಗೊಳ್ಳುವರು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ನಗರದ 20ನೇ ವಾರ್ಡ್‍ನ ಭಾರತ್ ಕಾಲೋನಿಯಲ್ಲಿ ಶಾಮನೂರು ಶಿವಶಂಕರಪ್ಪನವರು, ಪಿ.ಟಿ.ಪರಮೇಶ್ವರನಾಯ್ಕ, ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಡಿ.ಬಸವರಾಜ್, ವಿರೋಧ ಪಕ್ಷದ ನಾಯಕರಾದ ಎ.ನಾಗರಾಜ್, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ ಮತ್ತಿತರರು ಪ್ರಚಾರ ಕೈಗೊಳ್ಳುವರು.
ಇಂದು ಸಂಜೆ 5 ಗಂಟೆಗೆ ನಗರದ 22ನೇ ವಾರ್ಡ್‍ನ ಯಲ್ಲಮ್ಮ ನಗರದಲ್ಲಿ ಡಾ ಶಾಮನೂರು ಶಿವಶಂಕರಪ್ಪನವರು, ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಶಿವನಳ್ಳಿ ರಮೇಶ್, ಹೆಚ್.ಬಿ.ಮಂಜಪ್ಪ, ಡಿ.ಬಸವರಾಜ್, ವಿರೋಧ ಪಕ್ಷದ ನಾಯಕರಾದ ಎ.ನಾಗರಾಜ್, ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಮಹಾನಗರ ಪಾಲಿಕೆ ಹಾಲಿ/ ಮಾಜಿ ಸದಸ್ಯರುಗಳು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ವಾರ್ಡ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳಾದ ಎನ್‍ಎಸ್‍ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಿಸಾನ್ ಕಾಂಗ್ರೆಸ್, ಕಾರ್ಮಿಕ ವಿಭಾಗ, ಪರಿಶಿಷ್ಟ ಜಾತಿ, ಪಂಗಡ,ವಿಕಲಚೇತನರ ಘಟಕ, ಓ.ಬಿ.ಸಿ. ವಿಭಾಗದ ಎಲ್ಲಾ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಎಪಿಎಂಸಿ ಸದಸ್ಯರುಗಳು ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವ ಮೂಲಕ ಪ್ರಚಾರದಲ್ಲಿ ಭಾಗವಹಿಸಬೇಕೆಂದು ದಿನೇಶ್ ಕೆ.ಶೆಟ್ಟಿ ಕೋರಿದ್ದಾರೆ.



